ADVERTISEMENT

ಔಚಿತ್ಯದ ಎಲ್ಲೆ...

ಟಿ .ಆರ್.ಭಟ್ಟ, ಮಂಗಳೂರು
Published 4 ಮಾರ್ಚ್ 2016, 19:30 IST
Last Updated 4 ಮಾರ್ಚ್ 2016, 19:30 IST

ವಿಧಾನಸಭೆ ಕಲಾಪದಲ್ಲಿ  ಭಾಗವಹಿಸಿದ ಸಚಿವ ಬಿ.ರಮಾನಾಥ ರೈ ಅವರು, ‘ನೈತಿಕತೆ ಬಗ್ಗೆ ಮಾತನಾಡಲು ಸಿ.ಟಿ.ರವಿಯವರು ವಾಜಪೇಯಿ ಅವರ ಮೊಮ್ಮಗನೇ’ ಎಂದು ಕೇಳಿದರು. ಅದಕ್ಕೆ ಉತ್ತರವಾಗಿ ರವಿ, ‘ಸಚಿವರು ಶೇಖ್ ಅಬ್ದುಲ್ಲಾ ಅವರ ಮಗನಾ?’ ಎಂದು ಕಟಕಿಯಾಡಿದರು ಎಂದು  ವರದಿಯಾಗಿದೆ (ಪ್ರ.ವಾ., ಮಾರ್ಚ್‌ 2).

ಈ ಬಗೆಯ ಹೇಳಿಕೆಗಳು ಸದನಕ್ಕೆ ಮತ್ತು ಮಾತನಾಡುವ ಗಣ್ಯರಿಗೆ ಶೋಭೆ ತರುತ್ತವೆಯೇ? ಗಂಭೀರ ವಿಷಯಗಳ ಬಗ್ಗೆ ಚರ್ಚಿಸುವಾಗ ಆಗೊಮ್ಮೆ ಈಗೊಮ್ಮೆ ಹಾಸ್ಯಪ್ರಜ್ಞೆಯನ್ನು ತೋರುವುದು ತಪ್ಪಲ್ಲ. ಆದರೆ ಅದು ಔಚಿತ್ಯದ ಎಲ್ಲೆ ಮೀರಬಾರದು. ಈ ರೀತಿಯ ಮಾತುಗಳನ್ನು ಕೇಳಿಸಿಕೊಂಡಾಗ ನಮ್ಮ ಪ್ರತಿನಿಧಿಗಳ ವಾಗ್ವಾದದ ಮಟ್ಟ ಯಾಕೆ ಈ ಪರಿ ಕುಸಿದಿದೆ ಅಂತ ಬೇಸರವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.