ADVERTISEMENT

ಕನ್ನಡ ಮಂತ್ರಗಳಿರಲಿ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2017, 19:30 IST
Last Updated 10 ಅಕ್ಟೋಬರ್ 2017, 19:30 IST

ಬ್ರಾಹ್ಮಣೇತರ ಅರ್ಚಕರ ನೇಮಕಾತಿ ಕುರಿತಂತೆ ಮುಜರಾಯಿ ಇಲಾಖೆಯ ನಿರ್ಣಯ ಸಾಂವಿಧಾನಿಕವಾಗಿ ಸ್ವೀಕಾರಾರ್ಹ (ಸಾಮಾಜಿಕವಾಗಿ ಅದರ ಪರಿಣಾಮಗಳು ಏನೇ ಇರಲಿ!). ಈ ಸಂದರ್ಭದಲ್ಲಿ ನನ್ನ ಸಲಹೆ ಏನೆಂದರೆ, ಅರ್ಥವಾಗದ ಸಾಂಪ್ರದಾಯಿಕ ಸಂಸ್ಕೃತ ಭಾಷೆಯ ಮಂತ್ರ– ತಂತ್ರಗಳಿಗೆ ಬದಲಾಗಿ ಹೊಸದಾಗಿ ನೇಮಕಗೊಳ್ಳುವ ಅರ್ಚಕರಿಗೆ ಕನ್ನಡ ಭಾಷೆಯಲ್ಲಿ ಉಪಾಸನಾ ವಿಧಿಗಳ ತರಬೇತಿ ನೀಡಲಿ. ಇದು ಕಷ್ಟವೇನಲ್ಲ. ಹಿರೇಮಗಳೂರು ಕಣ್ಣನ್ ಅವರು ಈಗಾಗಲೇ ಕನ್ನಡದಲ್ಲಿ ಮಂತ್ರಗಳನ್ನು ರಚಿಸಿ ಪೂಜಾ ವಿಧಿಗಳನ್ನು ನಡೆಸುತ್ತಿರುವುದು ಜನಪ್ರಿಯವಾಗಿದೆ. ಅವರ ಸಹಾಯ ಪಡೆದು ಸರ್ಕಾರ ತನ್ನ ಕ್ರಾಂತಿಕಾರಿ ಬದಲಾವಣೆಯನ್ನು ಜಾರಿಗೆ ತರಬಹುದಾಗಿದೆ.

–ಎನ್. ನರಹರಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT