ADVERTISEMENT

ಕರಾಳ ಮುಖ

​ಪ್ರಜಾವಾಣಿ ವಾರ್ತೆ
Published 17 ಮೇ 2018, 19:30 IST
Last Updated 17 ಮೇ 2018, 19:30 IST

ಒಬ್ಬ ಶಿಕ್ಷಕರಿಗಾದ ಅನ್ಯಾಯವನ್ನು ಸರಿಪಡಿಸಲು ಹೋಗಿ ತಾವೇ ವಾಗ್ದಂಡನೆಯ ಸನಿಹದವರೆಗೂ ಬಂದ ಪ್ರಸಂಗವನ್ನು ಮತ್ತು ನ್ಯಾಯಾಂಗದಲ್ಲಿ ರಾಜಕೀಯ ಹಸ್ತಕ್ಷೇಪದಿಂದ ತಾವು ಕಿರಿಕಿರಿ ಅನುಭವಿಸಿದ್ದ ವಿಚಾರವನ್ನು ಅಲಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿದ್ದ (1991ರಲ್ಲಿ) ಮಾರ್ಕಂಡೇಯ ಕಟ್ಜು ಅವರು ಈಚೆಗೆ ಬಹಿರಂಗಪಡಿಸಿದ್ದಾರೆ (ಪ್ರ.ವಾ., ಮೇ 2).

ನ್ಯಾಯಾಂಗಕ್ಕೂ ಇಂದು ಸ್ವತಂತ್ರವಾಗಿ ಉಸಿರಾಡಲು ಸಾಧ್ಯವಾಗುತ್ತಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಇದು ನಿಜಕ್ಕೂ ಗಂಭೀರವಾಗಿ ಆಲೋಚಿಸಬೇಕಾದ ಸಂಗತಿ.

ರಾಜಕಾರಣಿಗಳು ಭ್ರಷ್ಟಾಚಾರದಿಂದಾಗಿ ಕೊಬ್ಬಿ ಬಿಟ್ಟಿದ್ದಾರೆ. ಅವರು ಚುನಾವಣೆಗಳಲ್ಲಿ ಹಣ ಚೆಲ್ಲಿ ಮತದಾರರನ್ನೇ ಖರೀದಿಸುವುದು ಒಂದು ಕಡೆಯಾದರೆ, ಮತ್ತೊಂದೆಡೆ ನ್ಯಾಯಾಂಗ ವ್ಯವಸ್ಥೆಯಲ್ಲಿ ಹಸ್ತಕ್ಷೇಪ ಮಾಡಿ ನ್ಯಾಯಾಂಗವನ್ನೂ ಹಾಳು ಮಾಡಲು ಯತ್ನಿಸುತ್ತಿದ್ದಾರೆ. ರಾಜಕೀಯ ಭ್ರಷ್ಟಾಚಾರದ ಕರಾಳ ಮುಖವಿದು.

ADVERTISEMENT

ಹುರುಕಡ್ಲಿ ಶಿವಕುಮಾರ, ಬಾಚಿಗೊಂಡನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.