ADVERTISEMENT

ಕರೆಂಟ್ ಕಂಬಕ್ಕೆ ಸುತ್ತಿಕೊಂಡ ಬಳ್ಳಿ

ಜಕ್ಕೂರು ಎಸ್.ನಾಗರಾಜು
Published 6 ಜೂನ್ 2011, 12:40 IST
Last Updated 6 ಜೂನ್ 2011, 12:40 IST

ಕುಮಾರ ಸ್ವಾಮಿ ಬಡಾವಣೆ ಹಾಗೂ ಇಸ್ರೋ ಬಡಾವಣೆಗಳಿಗೆ ತಮ್ಮ ಜಮೀನಿಗಳನ್ನು ಕೊಟ್ಟ ರೈತರು ಜೀವನೋಪಾಯಕ್ಕಾಗಿ ಎಮ್ಮೆ, ಹಸು, ಕುರಿಗಳನ್ನು ಸಾಕುತ್ತಿದ್ದಾರೆ. ಈ ಎರಡೂ ಬಡಾವಣೆಗಳಲ್ಲಿ ಸಾಕಷ್ಟು ಖಾಲಿ ನಿವೇಶನಗಳಿವೆ. ಆದರೆ ಇದರಲ್ಲಿ ಹುಲ್ಲು, ಗಿಡ- ಗಂಟಿ ಯಥೇಚ್ಛವಾಗಿ ಬೆಳೆದಿವೆ. ಇವುಗಳನ್ನು ಮೇಯಲು ಮೂಕ ಪ್ರಾಣಿಗಳು ಬರುವುದು ಸಹಜ.

ಇಂತಹ ಖಾಲಿ ನಿವೇಶನವೊಂದರಲ್ಲಿ ವಿದ್ಯುತ್ ಕಂಬಕ್ಕೆ ಬಳ್ಳಿಯೊಂದು ಹಬ್ಬಿದೆ. ಅದನ್ನು ಮೇಯಲು ಬಂದ ಪ್ರಾಣಿಗಳು ಅಥವಾ ಅಲ್ಲಿ ಆಟವಾಡಲು ಬರುವ ಮಕ್ಕಳಿಗೆ ಇದರಿಂದ ಖಂಡಿತ ಅಪಾಯ ಕಾದಿದೆ.  ಮಳೆ ಬಂದು ನೆಲ ತೇವವಾದಾಗ ನಿವೇಶನದ ಪಕ್ಕದಲ್ಲಿ ಓಡಾಡುವವರು ಅಪ್ಪಿ, ತಪ್ಪಿ ಬಳ್ಳಿ ಮೆಟ್ಟಿದರೂ ಶಾಕ್ ಹೊಡೆಯುವ ಸಂಭವ ಇದೆ. ಬೆಸ್ಕಾಂ ಸಿಬ್ಬಂದಿ ಇತ್ತ ಗಮನ ಹರಿಸುವರೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT