ADVERTISEMENT

ಕಸ ವಿಲೇವಾರಿ ಘಟಕ ಸ್ಥಳಾಂತರಿಸಿ

ಕುಂದು ಕೊರತೆ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2016, 19:30 IST
Last Updated 8 ಆಗಸ್ಟ್ 2016, 19:30 IST
ಕಸ ವಿಲೇವಾರಿ ಘಟಕ ಸ್ಥಳಾಂತರಿಸಿ
ಕಸ ವಿಲೇವಾರಿ ಘಟಕ ಸ್ಥಳಾಂತರಿಸಿ   

ಮಾಗಡಿ ರಸ್ತೆ ಟೋಲ್‌ಗೇಟ್‌ನಿಂದ ವಿಜಯನಗರಕ್ಕೆ ಹೋಗುವ ರಸ್ತೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಹುಡುಗರ ವಸತಿನಿಲಯದ ಬಳಿ ಬೆಳಿಗ್ಗೆ 7ರಿಂದ ಮಧ್ಯಾಹ್ನ 1ರವರೆಗೂ ರಸ್ತೆ ಮಧ್ಯದಲ್ಲೇ ಕಸದ ವಿಲೇವಾರಿ ಮಾಡುತ್ತಾರೆ.  ರಸ್ತೆಯ ಬಲಕ್ಕೆ ಕಸ ವಿಲೇವಾರಿ ಘಟಕ ಇದೆ.

ಕೈಗಾಡಿಗಳಲ್ಲಿ ತ್ಯಾಜ್ಯ ತುಂಬಿಸಿಕೊಂಡು ಬಂದವರು ಇದೇ ರಸ್ತೆಯಲ್ಲಿ ಸುರಿಯುತ್ತಾರೆ. ನಂತರ ಸಾಲು ಸಾಲು ಕಸದ ಲಾರಿಗಳು ಬಂದು ನಿಲ್ಲುತ್ತವೆ. ರಸ್ತೆಯ ಮುಕ್ಕಾಲು ಭಾಗ ತ್ಯಾಜ್ಯ ಮತ್ತು ತ್ಯಾಜ್ಯದ ವಾಹನಗಳೇ ತುಂಬಿ  ವಾಹನಗಳಿಗೆ ಸಂಚರಿಸಲು ತೊಂದರೆಯಾಗುತ್ತಿದೆ. ನಡೆದು ಹೋಗುವುದು ಸಾಧ್ಯವೇ ಇಲ್ಲ.

ತ್ಯಾಜ್ಯ ವಿಲೇವಾರಿಯಾದ ನಂತರ ತ್ಯಾಜ್ಯ ಸಾಗಿಸುವ ವಾಹನವನ್ನು ರಸ್ತೆ ಬದಿ ನಿಲ್ಲಿಸುತ್ತಾರೆ. ಕೆಲವು ಸಲ ತ್ಯಾಜ್ಯ ತುಂಬಿದ ವಾಹನವನ್ನೇ ನಿಲ್ಲಿಸಿರುತ್ತಾರೆ. ಹಸಿ ತ್ಯಾಜ್ಯದ ನೀರು  ರಸ್ತೆಯಲ್ಲಿ ನಿಂತು ದುರ್ನಾತ ಬೀರುತ್ತಿರುತ್ತದೆ. ಸಮೀಪವೇ ಇಂಡೇನ್‌ ಗ್ಯಾಸ್‌ ಏಜೆನ್ಸಿ, ಹೊಸಹಳ್ಳಿ ಮೆಟ್ರೊ ನಿಲ್ದಾಣ ಇದೆ. ಅಧಿಕಾರಿಗಳು ಕಸ ವಿಲೇವಾರಿಗೆ ಬೇರೆ ಜಾಗ ಗುರುತಿಸಬೇಕು. ಶೀಘ್ರ ಈ ಸಮಸ್ಯೆ ಪರಿಹರಿಸಬೇಕು ಎಂದು ವಿನಂತಿ.
–ನೇಸರ, ಪೈಪ್‌ಲೈನ್‌ ರಸ್ತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.