ADVERTISEMENT

ಕಾನೂನು ಬಾಹಿರ ನಿಯೋಜನೆ

ದೇಶಹಳ್ಳಿ ರಾಮಚಂದ್ರಾಚಾರಿ, ಮೈಸೂರು
Published 10 ಏಪ್ರಿಲ್ 2013, 19:59 IST
Last Updated 10 ಏಪ್ರಿಲ್ 2013, 19:59 IST

ಕರ್ನಾಟಕ ರಾಜ್ಯ ವಯಸ್ಕರ ಶಿಕ್ಷಣ ಸಮಿತಿಯು 1982ರಿಂದ ಅನುದಾನ ಸಂಹಿತೆಗೆ ಒಳಪಟ್ಟಿದ್ದು, 2001ರಲ್ಲಿ ವಿಸರ್ಜನೆ ಆಗಿದೆ.

ಇಂದು ಲೋಕ ಶಿಕ್ಷಣ ಇಲಾಖೆ ಅಧೀನದಲ್ಲಿ ಕೆಲಸ ಮಾಡುತ್ತಿದೆ. ದುರಂತ ಎಂದರೆ ಇದರ ಸಿಬ್ಬಂದಿ ವರ್ಗವನ್ನು ಯಾವುದೇ ಮಾನದಂಡ ಇಲ್ಲದೆ ಮನಬಂದಂತೆ ವರ್ಷಗಟ್ಟಲೆ ನಿಯೋಜನೆ ಮಾಡಿ ದೌರ್ಜನ್ಯ ಎಸಗುತ್ತಿದೆ.

ಅಮಾಯಕ ನೌಕರರಿಗೆ ನಿಯೋಜನೆ ಭತ್ಯವನ್ನು ಸಹ ಪಾವತಿಸದೆ ಹಿಂಸೆ ನೀಡಲಾಗುತ್ತಿದೆ.

ಸರ್ಕಾರವು ಇತ್ತ ಗಮನ ನೀಡಿ ಇಂತಹ ಕಾನೂನುಬಾಹಿರ ನಿಯೋಜನೆಗಳನ್ನು ರದ್ದುಪಡಿಸಿ ಸಂವಿಧಾನಬದ್ಧ ರಕ್ಷಣೆ ನೀಡಲು ವಿನಂತಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.