ADVERTISEMENT

ಕಾಫಿ ಮತ್ತು ಕಷ್ಟ!

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2018, 19:30 IST
Last Updated 2 ಏಪ್ರಿಲ್ 2018, 19:30 IST

ಪಾಪ! ಪಿ. ಚಿದಂಬರಂ ಅವರಿಗೆ ಕಾಫಿ– ಟೀ ಬೆಲೆ ಕೇಳಿ ಆಘಾತವಾಗಿರಬೇಕು. ಸ್ವಾಮಿ, ತಾವು ಹಣಕಾಸು ಮಂತ್ರಿಗಳಾಗಿದ್ದಾಗ ಎಂದಾದರೂ ಹೀಗೆಲ್ಲಾ ಅನಿಸಿದ್ದುಂಟೇ? ಬಡವರ, ಕಾರ್ಮಿಕರ ಹೊಟ್ಟೆಯ ಮೇಲೆ ಹೊಡೆಯುವಂತೆ ಮುಂಗಡ ಪತ್ರ ಮಂಡಿಸಿದಾಗ ಇವೆಲ್ಲ ಗಮನಕ್ಕೆ ಬಂದಿರಲಿಲ್ಲವೇ? ತಾವು ಅಧಿಕಾರದಲ್ಲಿದ್ದಾಗ ಹೇಳುವುದೇ ಒಂದು, ವಿರೋಧ ಪಕ್ಷದಲ್ಲಿ ಕುಳಿತಾಕ್ಷಣ ಹೇಳುವುದೇ ಮತ್ತೊಂದು.

ಸಂಸದರ ಸಂಬಳ– ಸಾರಿಗೆಗಳನ್ನು ಹೆಚ್ಚಿಸಿಕೊಳ್ಳುವಾಗ ಪಕ್ಷಭೇದವಿಲ್ಲದೆ ಒಮ್ಮತದಿಂದ ಕೈಯೆತ್ತುವ ನಮ್ಮ ಪ್ರಜಾಪ್ರತಿನಿಧಿಗಳಿಗೆ ಜನಸಾಮಾನ್ಯರ ಕಷ್ಟಕಾರ್ಪಣ್ಯ ಎಂದಾದರೂ ಅರಿವಾಗಿದೆಯೇ? ಚಿದಂಬರಂ ಅವರಿಗೆ ಈಗಲಾದರೂ ಜ್ಞಾನೋದಯವಾದುದಕ್ಕೆ ಧನ್ಯವಾದ.

ಗಂಜಾಂ ನಾಗರಾಜ, ಮೈಸೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.