ADVERTISEMENT

ಕಾವೇರಿ ವಿವಾದ: ಬಗೆಹರಿಯುವ ಸಮಸ್ಯೆಯೆ?

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2012, 19:30 IST
Last Updated 7 ಅಕ್ಟೋಬರ್ 2012, 19:30 IST

`ಕಾವೇರಿ ಜಲ ವಿವಾದ~ಕ್ಕೆ ಕೊನೆ ಇಲ್ಲವೆ? ನೀರು ನೈಸರ್ಗಿಕವಾದ ಅಮೂಲ್ಯ ವರದಾನ. ಅದರ ಸದ್ಬಳಕೆ ಮತ್ತು ಹಂಚಿಕೆ ನ್ಯಾಯಸಮ್ಮತವಾಗಿರಬೇಕಲ್ಲವೆ. ಈ ಸಮಸ್ಯೆಗೆ ಕಾರಣಗಳಿವೆ:

1. ಸಮಸ್ಯೆ ಮೂಲ ಅರಿಯಲು ಕೇಂದ್ರ ಹಾಗೂ ರಾಜ್ಯ ಸರ್ಕಾರದಲ್ಲಿ `ಇಚ್ಛಾಶಕ್ತಿ~ ಇಲ್ಲದಿರುವುದು.

2. ಹಿಂದೆ ಬ್ರಿಟಿಷರೊಂದಿಗೆ ಮಾಡಿಕೊಂಡ ನೀರು ಹಂಚಿಕೆ ಒಪ್ಪಂದ ಇಂದಿಗೂ ಎಷ್ಟು ಸಮಂಜಸ?

3. ಅಂದಿನ ಒಪ್ಪಂದ ಸರ್ವಕಾಲಕ್ಕೂ ಅನ್ವಯಿಸುವುದೆ? ಇಂದಿನ ವಾಸ್ತವಿಕತೆ ಮತ್ತು ಅಗತ್ಯತೆಗೆ ತಕ್ಕಂತೆ ಸೂಕ್ತ ಬದಲಾವಣೆ ಸಾಧ್ಯವಿಲ್ಲವೆ?

4. ಸಾಕಷ್ಟು ಮಳೆ ಬಂದು ಜಲಾಶಯಗಳು ತುಂಬಿದಲ್ಲಿ ಈ ಸಮಸ್ಯೆ ಇರುವುದಿಲ್ಲ.

5. ತಮಿಳುನಾಡಿನ ಮುಖ್ಯಮಂತ್ರಿ, ಸಂಸದರು ಕೇಂದ್ರದಲ್ಲಿ ಸಾಕಷ್ಟು ಪ್ರಭಾವ ಬೀರಿ ತಮ್ಮ ಪಾಲನ್ನು ಪಡೆದು ಯಶಸ್ವಿಯಾಗುತ್ತಾರೆ.

6.ತಮಿಳುನಾಡಿನ ಬೆಳೆಗಳಿಗೆ ನೀರು ಬೇಕು, ಕರ್ನಾಟಕದ ಬೆಳೆಗಳಿಗೆ ನೀರು ಬೇಡ ಎನ್ನುವ ಸ್ವಾರ್ಥ ಅವೈಜ್ಞಾನಿಕ ನಿಲುವು.

7. ಮೂಲ ಒಪ್ಪಂದ ಕಾಯ್ದೆಗೆ ಸೂಕ್ತ ತಿದ್ದುಪಡಿ ಮಾಡದೆ ಪ್ರತಿಸಲ ಮೇಲ್ಮನವಿ ಸಲ್ಲಿಸುವುದರಲ್ಲಿ ಏನು ಪ್ರಯೋಜನ?

ಆದ್ದರಿಂದ ಮೂಲ ಒಪ್ಪಂದಕ್ಕೆ ಗಮನಹರಿಸಿದರೆ ಇತರೆ ವಿಚಾರಗಳನ್ನು ತಜ್ಞರಿಂದ ಸಮಿತಿಗಳಿಂದ ರೈತ ಸಂಘಟನೆ ಮುಖಂಡರಿಂದ ಹಂತ ಹಂತವಾಗಿ ಬಗೆಹರಿಸಲು ಸಾಧ್ಯ ಎನ್ನುವ ವಿಶ್ವಾಸದೊಂದಿಗೆ ನಾಡಿನ ಜನತೆಯ ಪರವಾಗಿ ವಿನಂತಿ.
 -ಎಂ.ಎಲ್. ಚನ್ನಕೃಷ್ಣಯ್ಯ, ಬ್ರಹ್ಮಾವರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.