ವಿಧಾನಸೌಧದ ಬಳಿ ಗಾಂಧೀಜಿಯವರ ಪ್ರತಿಮೆ ಸ್ಥಾಪಿಸುವುದಾಗಿ ಮುಖ್ಯಮಂತ್ರಿಯವರು ಘೋಷಿಸಿದ್ದಾರೆ. ಈಗಿರುವ ಗಾಂಧಿ ಪ್ರತಿಮೆ ವಿಧಾನಸೌಧಕ್ಕೆ ಅನತಿ ದೂರದಲ್ಲಿದೆ. ಇನ್ನೊಂದು ಪ್ರತಿಮೆ ಬೇಕಿದ್ದರೆ ಸ್ವಾತಂತ್ರ್ಯ ಉದ್ಯಾನದಲ್ಲಿ ಸ್ಥಾಪಿಸಲಿ.ಕನ್ನಡ ಸಂಸ್ಕೃತಿಯ ಸಂಕೇತವಾದ ಕವಿಯೊಬ್ಬರ ಪ್ರತಿಮೆ ವಿಧಾನಸೌಧದ ಆವರಣದಲ್ಲಿ ಇಲ್ಲ.
ವಿಶ್ವ ಮಾನವ ತತ್ವವನ್ನು ಜಗತ್ತಿಗೆ ನೀಡಿದ ಶ್ರೇಷ್ಠ ಕವಿ, ದಾರ್ಶನಿಕ ಕುವೆಂಪುರವರ ಆಳೆತ್ತರದ ಪ್ರತಿಮೆಯನ್ನು ವಿಧಾನಸೌಧ - ವಿಕಾಸಸೌಧಗಳ ನಡುವೆ ಸ್ಥಾಪಿಸಲು ಸರ್ಕಾರ ಪ್ರಯತ್ನಿಸಬೇಕು. ಈ ಮೂಲಕ ಮಹಾಕವಿಗೆ ಕರ್ನಾಟಕ ಸರ್ಕಾರ ಎಷ್ಟೊಂದು ಗೌರವ ಕೊಡುತ್ತದೆ ಎಂಬದು ಇಡೀ ದೇಶಕ್ಕೆ ತಿಳಿಯಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.