ADVERTISEMENT

ಕೆರೆ ಉಳಿಸಿ

ಎಚ್.ಎಸ್.ಮಂಜುನಾಥ
Published 15 ಜುಲೈ 2013, 19:59 IST
Last Updated 15 ಜುಲೈ 2013, 19:59 IST

ಯಲಹಂಕ ಉಪನಗರದ `ಎ' ಸೆಕ್ಟರ್ ಬಳಿಯ ಅಲ್ಲಾಳಸಂದ್ರ ಕೆರೆಯನ್ನು ಸಂರಕ್ಷಿಸುವ, ಅಭಿವೃದ್ಧಿಪಡಿಸುವ ಒಂದು ಯೋಜನೆ ಮುಗಿದಿದೆ. ಅದಕ್ಕೆ ನೀರು ತುಂಬಿಸಿ, ಬೋಟಿಂಗ್ ವ್ಯವಸ್ಥೆ ಮಾಡುವ ಮಾತೂ ಇತ್ತು. ಈಗ ಅಲ್ಲಿ ಹೋಗಿ ನೋಡಿದರೆ ತೇಪೆ ಹಾಕಿದಂತೆ ಎರಡು ಕಡೆ ಒಂದಿಷ್ಟು ನೀರಿದೆ. ಅದರಲ್ಲಿ ಒಂದು ಭಾಗ ಕೊಳಚೆ ನೀರಿನಂತೆ ಕಾಣುತ್ತದೆ. ಕೆರೆಯ ಪಕ್ಕ ವಿಹರಿಸಲು ದಾರಿಯನ್ನೇನೋ ಮಾಡಿದ್ದಾರೆ, ಆದರೆ ಅದರ ಅಕ್ಕಪಕ್ಕ ಪಾರ್ಥೇನಿಯಂ ಸಾಮ್ರಾಜ್ಯ.

ಕೆರೆಗೆ ಎಲ್ಲೆಲ್ಲಿಂದಲೂ ಪ್ರವೇಶಿಸದಂತೆ ಮೆಶ್ ಬೇಲಿ/ಗೋಡೆ ನಿರ್ಮಿಸಿದ್ದಾರೆ. ಆದರೂ ಜನ ಕೆರೆಯ ಹತ್ತಿರದ ಕಾಲುಹಾದಿಯಲ್ಲೇ ಮಲ ವಿಸರ್ಜಿಸುವುದನ್ನು ನಿಲ್ಲಿಸಿಲ್ಲ. ಕೆರೆ ಉಳಿಯಬೇಕೆಂದರೆ ನೀರಿರಬೇಕು. ತ್ಯಾಜ್ಯ ವಸ್ತುಗಳು, ಮಲಿನಗೊಂಡ ನೀರು ಅದರೊಳಗೆ ಹೋಗಬಾರದು. ಸೌಂದರ‌್ಯೀಕರಣ, ವಿಹಾರ ಸೌಲಭ್ಯ ಮುಂದಿನ ಮಾತು.

ಈಗ ನಿರ್ಮಿಸಿರುವುದನ್ನು ಸುಸ್ಥಿತಿಯಲ್ಲಿ ಇಡುವ ಸತತ ಉಸ್ತುವಾರಿ ವ್ಯವಸ್ಥೆ ಆಗಬೇಕು. `ಜನಪ್ರತಿನಿಧಿ'ಗಳ ಆಸಕ್ತಿಯು ಉದ್ಘಾಟಿಸಿ ಫೋಟೊ ತೆಗೆಸಿಕೊಳ್ಳುವುದಕ್ಕಷ್ಟೇ ಸೀಮಿತವಾಗಬಾರದು, ಹತ್ತಿರದಲ್ಲೇ ಇರುವ ಕಾವೇರಿ ಅಪಾರ್ಟ್‌ಮೆಂಟ್ ಕಾಂಪ್ಲೆಕ್ಸ್‌ನ ಮುಂದೆ ಡಬಲ್‌ರೋಡ್‌ನ ಮೇಲೆ ಈಗಲೂ ಆಗಾಗ ಚರಂಡಿ ನೀರು ನಿಲ್ಲುವುದುಂಟು.

(ಇದೇ ವರ್ಷ ಹಿಂದಿನ ಮುಖ್ಯಮಂತ್ರಿಗಳು ಉದ್ಘಾಟಿಸಿದ್ದರು).
 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.