ADVERTISEMENT

ಕೆಲಸದ ಅವಧಿಯೂ ಹೆಚ್ಚಲಿ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2012, 19:30 IST
Last Updated 10 ಏಪ್ರಿಲ್ 2012, 19:30 IST

ರಾಜ್ಯ ಸರ್ಕಾರದ ಕಚೇರಿಗಳು ಈಗಿರುವಂತೆಯೇ ವಾರದಲ್ಲಿ ಆರುದಿನ ಕಾರ್ಯ ನಿರ್ವಹಿಸಲಿವೆ ಎಂದು ಮುಖ್ಯಮಂತ್ರಿ ಡಿ. ಬಿ. ಸದಾನಂದಗೌಡರು ಸ್ಪಷ್ಟನೆ ನೀಡಿ ಈ ಬಗ್ಗೆ ಇದ್ದ ಗೊಂದಲ ನಿವಾರಿಸಿದ್ದಾರೆ.

ನೌಕರರ ವೇತನವನ್ನು ಹೆಚ್ಚಿಸಿರುವುದರಿಂದ ಕೆಲಸದ ಅವಧಿಯನ್ನೂ ಹೆಚ್ಚಿಸುವುದು ಸೂಕ್ತ. ಸರ್ಕಾರಿ ಕಚೇರಿಗಳು ಬೆಳಿಗ್ಗೆ 10ಕ್ಕೆ ಪ್ರಾರಂಭವಾಗಿ ಸಂಜೆ 6ರ ವರೆಗೂ ಕಾರ್ಯನಿರ್ವಹಿಸಬೇಕು.

ವಿರಾಮದ ವೇಳೆ ಅರ್ಧಗಂಟೆ ಸಾಕು. ಸಾಧ್ಯವಾದರೆ ತಿಂಗಳ ಎರಡನೇ ಶನಿವಾರದ ರಜೆಯನ್ನೂ ರದ್ದುಪಡಿಸುವುದು ಸೂಕ್ತ. `ಸಕಾಲ~ ಜಾರಿ ಆಗಿರುವುದರಿಂದ ಕೆಲಸಗಳು ಬೇಗ ಬೇಗ ನಡೆಯಲು ನೆರವಾಗುತ್ತದೆ.

 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.