
ಪ್ರಜಾವಾಣಿ ವಾರ್ತೆನಗರದ ಸೇಂಟ್ ಮಾರ್ಥಾಸ್ ಆಸ್ಪತ್ರೆಯ ಕೆಂಪೇಗೌಡ ರಸ್ತೆಯಲ್ಲಿರುವ ದ್ವಾರದಿಂದ ಮತ್ತೊಂದು ರಸ್ತೆಯ ಬದಿಗೆ ದಾಟಲು ಇಲ್ಲಿ ಮಿನುಗುವ ಸಿಗ್ನಲ್ ದೀಪದ ವ್ಯವಸ್ಥೆ ಇದ್ದರೂ ವಾಹನ ಚಾಲಕರು ವೇಗವಾಗಿ ಗಾಡಿಗಳನ್ನು ಓಡಿಸುವುದರಿಂದ ಮುಖ್ಯವಾಗಿ ವಯಸ್ಕರು, ಹೆಂಗಸರು, ಮಕ್ಕಳು ರಸ್ತೆ ದಾಟಲು ಹರಸಾಹಸ ಪಡುವಂತಾಗಿದೆ.
ಆದ್ದರಿಂದ ಇದನ್ನು ಮನಗಂಡು ಸಂಬಂಧಪಟ್ಟ ಅಧಿಕಾರಿಗಳು ಇತ್ತಗಮನ ಹರಿಸಿ, ರಿಸರ್ವ್ ಬ್ಯಾಂಕ್ ಬಳಿ ನಿರ್ಮಿಸಿರುವ ಕೆಳಸುರಂಗಮಾರ್ಗದಂತೆ ಇಲ್ಲಿಯೂ ನಿರ್ಮಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.