ADVERTISEMENT

ಖಾಲಿ ಹ್ದ್ದುದೆಗಳಿಗೆ ನೇಮಕಾತಿ ಆಗಲಿ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2012, 19:30 IST
Last Updated 8 ಫೆಬ್ರುವರಿ 2012, 19:30 IST

ವಿವಿಧ ಇಲಾಖೆಗಳಲ್ಲಿರುವ 1.42 ಸಾವಿರ ಹುದ್ದೆಗಳನ್ನು ಸರ್ಕಾರ ತುಂಬದೆ ಖಾಲಿ ಉಳಿಸಿಕೊಂಡಿದೆ. ಸರ್ಕಾರದ ಸಚಿವರು ಒಂದು ಕಡೆ ನಿರುದ್ಯೋಗ ನಿವಾರಣೆ ಮಾಡುವ ಭಾಷಣ ಮಾಡುತ್ತಾರೆ. ಇನ್ನೊಂದೆಡೆ ಸರ್ಕಾರ ನೇಮಕಾತಿ ಮಾಡದೆ ಮಿತವ್ಯಯ ಕ್ರಮ ಅನುಸರಿಸುತ್ತ ನಿರುದ್ಯೋಗಿಗಳನ್ನು ನಿರಾಸೆಗೊಳಿಸುತ್ತಿದೆ.

ಸರ್ಕಾರ ತನ್ನ ನೌಕರರ ನಿವೃತ್ತಿ ವಯಸ್ಸನ್ನು ಎರಡು ವರ್ಷ ಏರಿಕೆ ಮಾಡಿದ್ದರಿಂದ ನಿರುದ್ಯೋಗಿಗಳಿಗೆ  ಅನ್ಯಾಯವಾಯಿತು. ಇದರಿಂದ ಸರ್ಕಾರಕ್ಕೆ ಉಳಿತಾಯವಾಗುವ ಬದಲು ಸಾಕಷ್ಟು ನಷ್ಟವೇ ಆಗಿದೆ.

ಸರ್ಕಾರ ಈಗಲಾದರೂ  ಖಾಲಿ ಹುದ್ದೆಗಳನ್ನು ತುಂಬಿಕೊಳ್ಳಲು ಮನಸ್ಸು ಮಾಡಬೇಕು. ಸರ್ಕಾರಿ ನೌಕರಿಯ ವಯೋಮಿತಿಯನ್ನು ಕನಿಷ್ಠ `ಸಿ~ ಮತ್ತು `ಡಿ~ ದರ್ಜೆ ಹುದ್ದೆಗಳಿಗಾದರೂ ಏರಿಕೆ ಮಾಡಬೇಕು.
 
ಈ ಕ್ರಮದಿಂದ ಅನೇಕ ನಿರುದ್ಯೋಗಿಗಳಿಗೆ ನ್ಯಾಯ ಒದಗಿಸಿದಂತೆ ಆಗುತ್ತದೆ. ಇತರ ರಾಜ್ಯಗಳಲ್ಲಿ ವಯೋಮಿತಿ ಏರಿಸಲಾಗಿದೆ. ಸರ್ಕಾರ ಈ ಕುರಿತು ವಿಧಾನ ಸಭೆಯಲ್ಲಿ ಚರ್ಚಿಸಿ ಸೂಕ್ತ ನಿರ್ಧಾರಕ್ಕೆ ಬರಲಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.