ADVERTISEMENT

ಗಣಿತಕ್ಕೆ 60 ನಿಮಿಷ ಅವಧಿ ಜಾರಿಗೆ ಬರಲಿ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2012, 19:30 IST
Last Updated 4 ಅಕ್ಟೋಬರ್ 2012, 19:30 IST

ಇದು ನನ್ನ ಸಮಸ್ಯೆ ಮಾತ್ರವಲ್ಲ. ಸಮಸ್ತ ಗಣಿತ ಶಿಕ್ಷಕರ ಸಮಸ್ಯೆ. 40 ನಿಮಿಷದ ಗಣಿತ ಅವಧಿ ಪ್ರಸ್ತುತ ಹೊಸ ಗಣಿತ ಪಠ್ಯಕ್ರಮಕ್ಕೆ ಅವೈಜ್ಞಾನಿಕ.

ಇಲ್ಲಿ ಪ್ರತಿಯೊಂದು ಪರಿಕಲ್ಪನೆಗಳು ಮಕ್ಕಳ ಶೈಕ್ಷಣಿಕ ಹಿನ್ನೆಲೆಗೆ ಎಷ್ಟೊಂದು ಸಮೀಪವಿದೆ ಎನ್ನುವುದನ್ನು ಶಿಕ್ಷಣ ತಜ್ಞರೇ ಅಥವಾ ನಮ್ಮ ಪಠ್ಯಕ್ರಮ ರಚನಾ ಸಮಿತಿಯವರೇ ಗ್ರಾಮೀಣ ಪ್ರೌಢ ಶಾಲೆಗಳಿಗೆ ಭೇಟಿ ನೀಡಿ ನಿರ್ಧರಿಸಲಿ.

ಇಂತಹ ಪಠ್ಯ ಕ್ರಮವನ್ನು ಮಕ್ಕಳಿಗೆ ಪ್ರಾಮಾಣಿಕವಾಗಿ ಮುಟ್ಟಿಸಲು 40 ನಿಮಿಷ ಸಾಲದು. 40 ನಿಮಿಷದಲ್ಲಿ 5ರಿಂದ 10 ನಿಮಿಷ ಹಿಂದಿನ ಅವಧಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳುವಲ್ಲಿ, ಹೋಂವರ್ಕ್ ವೀಕ್ಷಿಸುವುದರಲ್ಲಿ, ಮಕ್ಕಳ ಸಮಸ್ಯೆಗಳನ್ನು ಬಿಡಿಸುವಲ್ಲಿ ಹೋದರೆ, ಹೊಸ ಪರಿಕಲ್ಪನೆ ಅಥವಾ ಹಳೆಯ ಪರಿಕಲ್ಪನೆ ಮುಂದುವರಿಕೆಗೆ ಉಳಿದದ್ದು ಕೇವಲ 25 ರಿಂದ 30 ನಿಮಿಷ.

ಇದರಲ್ಲಿ ಒಂದು ಸಮಸ್ಯೆಯನ್ನು ಬಿಡಿಸಲು ಆಯ್ದುಕೊಂಡರೆ ಕನಿಷ್ಟ ಅದನ್ನು ಯಾವುದೇ ಪೂರ್ವಜ್ಞಾನವಿಲ್ಲದ 8ನೇ ತರಗತಿ ವಿದ್ಯಾರ್ಥಿಗೆ ಅರ್ಥೈಸಲು ಕನಿಷ್ಟ 6 ರಿಂದ 7 ನಿಮಿಷ ಸಮಯಬೇಕು.ಆ ಸಮಸ್ಯೆಯನ್ನು ಬರೆದುಕೊಳ್ಳಲು ಎಲ್ಲ ಮಕ್ಕಳು ಸರಾಸರಿ 4 ರಿಂದ 5 ನಿಮಿಷ ತೆಗೆದುಕೊಂಡರೆ ಒಂದು ಅವಧಿಯಲ್ಲಿ 2 ಸಮಸ್ಯೆಗಳ ಚರ್ಚೆ ಮಾತ್ರ!
ಪ್ರಸ್ತುತ ನಮ್ಮ 8ನೇ ತರಗತಿ ಗಣಿತ ಪುಸ್ತಕದಲ್ಲಿ ಪ್ರತಿ ಘಟಕಕ್ಕೆ ಸುಮಾರು 20 ವಿಭಿನ್ನ ಹೆಚ್ಚುವರಿ ಸಮಸ್ಯೆಗಳನ್ನು ಕೊಡಲಾಗಿದೆ.

ಅಂದರೆ ಇದರ ಪ್ರಕಾರ 1 ವರ್ಷದಲ್ಲಿ ರಜೆ, ತರಬೇತಿ, ಕಾರ್ಯಕ್ರಮ ಇವುಗಳನ್ನು ಹೊರತುಪಡಿಸಿ ಉಳಿಯುವ ಕೆಲಸದ ಅಂದರೆ ಶಾಲೆ ನಡೆಯುವ ದಿನಗಳನ್ನು ಲೆಕ್ಕಿಸಿದರೆ ಎಷ್ಟು ಘಟಕಗಳನ್ನು ನಮ್ಮ ಶಿಕ್ಷಕರು ಮುಗಿಸಿಯಾರು? 60 ನಿಮಿಷದ ಅವಧಿ ಮನೋವೈಜ್ಞಾನಿಕವಲ್ಲವೆಂದರೆ ಪಠ್ಯಕ್ರಮ ಮನೋವೈಜ್ಞಾನಿಕ ಮತ್ತು ಪ್ರಾಯೋಗಿಕವಾಗಿದೆಯೆ?
 

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.