ADVERTISEMENT

ಗುಂಡಿ ಮುಚ್ಚಿಸಿ

​ಪ್ರಜಾವಾಣಿ ವಾರ್ತೆ
Published 21 ಮೇ 2012, 19:30 IST
Last Updated 21 ಮೇ 2012, 19:30 IST

ಉಲ್ಲಾಳು ಉಪನಗರದ ಅಂಬೇಡ್ಕರ್ ನಗರದ 9ನೇ ಕ್ರಾಸ್‌ನಲ್ಲಿ ಮಳೆ ಬಂದರೆ ನರಕವನ್ನೇ ಸೃಷ್ಟಿಸುತ್ತದೆ. ಎತ್ತರ ಪ್ರದೇಶದಿಂದ ಮಳೆ ನೀರು ಹಳ್ಳದೋಪಾದಿಯಲ್ಲಿ ಹರಿದು ರಸ್ತೆಯ ಮಣ್ಣೆಲ್ಲ ಕೊಚ್ಚಿ ಹೋಗಿದೆ.  

ಈ ಕೊರಕಲು ದಾಟಿ ಓಡಾಡುವುದೇ ಸವಾಲಾಗಿದೆ.  ರಸ್ತೆ ದಾಟಲು ಇಲ್ಲಿನ ನಿವಾಸಿಗರು ಪರ್ಯಾಯ ವ್ಯವಸ್ಥೆ ಮಾಡಿಕೊಂಡಿದ್ದಾರೆ.  ಹೊಂಡಕ್ಕೆ ಅಡ್ಡಡ್ಡವಾಗಿ ಕಲ್ಲುಗಳನ್ನಿರಿಸಿ ದಾಟುತ್ತಿದ್ದಾರೆ.

ಮಳೆ ಬಂದಾಗ ಮಕ್ಕಳೇನಾದರೂ ಆಯತಪ್ಪಿ ಬಿದ್ದರೆ ಅವರೆಲ್ಲ ಜಲಪಾಲು ಆಗುವುದು ಖಂಡಿತ. ಮಳೆ ನೀರಿನ ಜೊತೆಗೆ ಚರಂಡಿ ಕೊಳಚೆಯೂ ರಸ್ತೆ ಮೇಲೆ ಹರಿಯುತ್ತದೆ. ಓಡಾಡಲು ಹಿಂಸೆಯಾಗುತ್ತದೆ.  ಹಾಗಾಗಿ  ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳು ಮೂಲಸೌಕರ್ಯ ಕಲ್ಪಿಸುವತ್ತ ಗಮನಹರಿಸಬೇಕಿದೆ.
-ಅಂಬೇಡ್ಕರ್ ನಗರ ನಿವಾಸಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.