ADVERTISEMENT

ಗುತ್ತಿಗೆದಾರರು!

ದೀಪ್ತಿ ಭದ್ರಾವತಿ, ಭದ್ರಾವತಿ
Published 13 ಜನವರಿ 2016, 19:30 IST
Last Updated 13 ಜನವರಿ 2016, 19:30 IST

ಪವಿತ್ರ ಆತ್ಮಗಳೇ
ನಿಜ,
ನಾವು ಮುಟ್ಟೆಂಬ
ಮಾಯೆಯ ಮೈಲಿಗೆಯನ್ನು
ಜೊತೆಗಿಟ್ಟುಕೊಂಡೇ ಹುಟ್ಟಿದವರು
ನೀವೋ ಜ್ಯೋತಿರ್ಲಿಂಗದಂತೆ
ಆವಿರ್ಭವಿಸಿದ ಅಯೋನಿಜರು,
ನಾವು ಕನಿಷ್ಠರು, ಸಾಯುವವರೆಗೂ
ನಿಮ್ಮ ಮಡಿಯ ಪೂಜೆಗಳಿಗೆ
ಹೂ ಕಟ್ಟಿಕೊಡುವವರು,
ನೀವೋ ಸರ್ವಶ್ರೇಷ್ಠರು
ಸಕಲ ಪರಂಪರೆಗಳನ್ನು ಕಣ್ತೆರೆಯುವಾಗಲೇ
ಗುತ್ತಿಗೆ ಪಡೆದವರು,
ಕಾಪಾಡಿಕೊಳ್ಳಿ ಪುಣ್ಯಪುರುಷರೇ
ಸದಾಚಾರಿಗಳೇ
ಧರ್ಮಬೀರುಗಳೇ...
ನಿಮ್ಮ ಸದ್ಗುಣದ ಮನಸ್ಸಿನಿಂದ
ಈ ನೆಲದ ಎಲ್ಲ
ದೇವಾನು ದೇವತೆಗಳ,
ನಮ್ಮನ್ನು ಬದಿಗಿಡುವ ಪರಂಪರೆಗಳ
ಬೇಡುವ ದರ್ದು ನಮಗೂ ಬೇಕಿಲ್ಲ!
(ಶಬರಿಮಲೆ: ಪರಂಪರೆ ಮುರಿಯಲು
ಸಾಧ್ಯವಿಲ್ಲ- ಪ್ರ.ವಾ. ಜ. 13)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.