ಕಂಡೆ ಕಂಡೆ ಗೆಳೆಯ ಶುಕ್ರಾ
ಏನು ಅದ್ಭುತ ಈ ಕ್ಷಣಾ
ತಂದೆ ಸೂರ್ಯನ ಹೆಗಲು ಏರಿದ
ಶುಕ್ರ ತಾರೆಯ ಈ ಛಲಾ
ನನ್ನ ನಿದ್ದೆಯ ಗುದ್ದಿ ಎಬ್ಬಿಸಿ
ಖುಶಿಯ ನೀಡಿದೆ ಗೆಳೆಯನೆ
ಈ ಶತಮಾನದ ಅದ್ಭುತ ಅಚ್ಚರಿ
ಶುಕ್ರ ಸೂರ್ಯನ ಸಂಗಮಾ
ಸಾಕು ನಿಲ್ಲಿಸಿ ಕೊಳೆಯ ಕಳೆಯಿರಿ
ಬಾನು ಬಯಲು ಕರೆದಿವೆ
ಕಾಡು ಕತ್ತಲೆ ಕೊಳೆಯು ಸಾಕು
ವಿಶ್ವ ತನ್ನನು ತೆರೆದಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.