ADVERTISEMENT

ಗೋ ಶಾಲೆಗಳಿಗೆ ಗುಜರಾತ್ ಮಾದರಿ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2012, 19:30 IST
Last Updated 14 ಆಗಸ್ಟ್ 2012, 19:30 IST

ಈಚೆಗೆ ಗುಜರಾತ್ ಪ್ರವಾಸ ಕೈಕೊಂಡಾಗ ಅಲ್ಲಿಯ ಗೋ ಶಾಲೆಗಳನ್ನು ನೋಡುವ ಅವಕಾಶ ಸಿಕ್ಕಿತು. ಅಲ್ಲಿ ಪ್ರತಿ ದೊಡ್ಡ ಊರು ಹಾಗೂ ಪಟ್ಟಣಗಳಲ್ಲಿ ಗೋ ಶಾಲೆಗಳಿರುವುದು ಕಂಡು ಸಂತೋಷವಾಯಿತು. ಸಾಮಾನ್ಯವಾಗಿ ಊರ ನಡುವೆ ಗೋಶಾಲೆಗಳು ಇರುತ್ತವೆ. ಅಲ್ಲಿ ಆಕಳು, ಎತ್ತು ಹಾಗೂ ಕರುಗಳಿರುವುದನ್ನು ಕಾಣುತ್ತೇವೆ.

ಅಲ್ಲಿ ಅವಕ್ಕೆ ಮೇವು ಹಾಗೂ ನೀರಿನ ವ್ಯವಸ್ಥೆ ಮಾಡಿರುತ್ತಾರೆ. ರೋಗ ಬಂದರೆ ಔಷಧ ವ್ಯವಸ್ಥೆಯೂ ಇದೆ. ಸಾಮಾನ್ಯವಾಗಿ ಪೌರಾಡಳಿತ ಸಂಸ್ಥೆಗಳು ಸಂಘ ಸಂಸ್ಥೆಗಳು ಇವುಗಳ ಉಸ್ತುವಾರಿ ನಡೆಸುತ್ತಿದ್ದರೂ ಸಾಮಾನ್ಯ ಜನರೂ ಇದಕ್ಕಾಗಿ ತಮ್ಮ ಅಳಿಲು ಸೇವೆ ಸಲ್ಲಿಸುತ್ತಾರೆ. ಸಮೀಪದಲ್ಲಿ ಹಸಿರು ಮೇವು ಮಾರುವ ಜನರು ಕಂಡುಬರುತ್ತಾರೆ.
 
ಇವರು ಸೈಕಲ್ ಮತ್ತು ಮೋಟಾರ್ ಸೈಕಲ್‌ಗಳ ಮೇಲೆ ಹಸಿರು ಮೇವು ತಂದಿರುತ್ತಾರೆ. ಸಾರ್ವಜನಿಕರು ತಮ್ಮ ಕೈಲಾದಷ್ಟು ಮೇವಿನ ಸಿವುಡುಗಳನ್ನು ಖರೀದಿಸಿ ಗೋವುಗಳಿಗೆ ಹಾಕುತ್ತಾರೆ. ಗುಜರಾತಿ ಜನರು ಗೋವುಗಳ ಮೇಲೆ ಕೇವಲ ಮುಗ್ಧ ಭಕ್ತಿ ತೋರಿಸದೆ ಅವುಗಳ ರಕ್ಷಣೆಗೆ ಕೈಲಾದ ಸೇವೆ ಮಾಡುತ್ತಿರುತ್ತಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.