ಆದಾಯ ತೆರಿಗೆ ಅಧಿಕಾರಿಗಳು, ಕರ್ನಾಟಕದ ಹಲವಾರು ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿ ನಡೆಸಿದ್ದಾರೆ. ಇದೊಂದು ಸಹಜ ಕ್ರಿಯೆಯಾಗಿದ್ದು, ಶಿಕ್ಷಣದ ವ್ಯಾಪಾರೀಕರಣದ ಈ ಸಂದರ್ಭಕ್ಕೆ ಈ ಬಗೆಯ ತಪಾಸಣೆ ಒಂದು ಎಚ್ಚರಿಕೆಯಾಗಿದೆ. ಆದರೆ ಇದನ್ನು ಉಗ್ರವಾಗಿ ಖಂಡಿಸುವ ಮೂಲಕ ನಮ್ಮ ಜನನಾಯಕರು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗತೊಡಗಿರುವುದು ಆತಂಕದ ಸಂಗತಿ.
ಮಾಜಿ ಮುಖ್ಯಮಂತ್ರಿಗಳೂ ಈ ಬಗೆಯ ಸ್ವಜಾತಿ ಪ್ರಚೋದನೆಗೆ ಇಳಿದಿರುವುದು ಅತ್ಯಂತ ಶೋಚನೀಯ. ಜನಪ್ರತಿನಿಧಿಗಳಾಗಿ ಆಯ್ಕೆಯಾದವರು, ಸಂವಿಧಾನಬದ್ಧ ಒಂದು ಸಂಸ್ಥೆಯ ವಿರುದ್ಧ ಜಾತಿಯ ಪರವಾಗಿ ಅವಹೇಳನಕಾರಿಯಾಗಿ ನಡೆದುಕೊಳ್ಳುತ್ತಿರುವುದು ಎಷ್ಟು ಸರಿ? ಪ್ರಬಲ ಜಾತಿಯವರು, ಏನೆಲ್ಲಾ ಅನಾಹುತ ಮಾಡಿದರೂ, ಯಾರೂ ಅವರನ್ನು ಪ್ರಶ್ನಿಸಬಾರದು. ಈ ನೆಲದ ಕಾಯ್ದೆ ಇರುವುದು ಬಡವರಿಗೆ, ದಲಿತರಿಗೆ ಎಂಬ ರೀತಿಯ ವರ್ತನೆ ದರ್ಪಿಷ್ಟತನದಿಂದ ಕೂಡಿದೆ. ಜಾತಿಯ ಹೆಸರಿನಲ್ಲಿ ಈ ರೀತಿಯ ಸಂಘಟನೆ, ಹೇಳಿಕೆ, ಪ್ರತಿಭಟನೆ ತಲೆ ತಗ್ಗಿಸುವ ಸಂಗತಿ. ಪ್ರತಿಯೊಬ್ಬ ನಾಗರಿಕನೂ ಖಂಡಿಸಬಹುದಾದ ನಡಾವಳಿ. ಪ್ರತಿನಿಧಿಗಳ ದಿವಾಳಿತನದ ಪ್ರತೀಕ ಹೌದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.