ಚಂದಾ ವಸೂಲಿ ಮಾಡದಂತೆಯೂ ಹಾಗೂ ಮಾಡಿದರೆ ಉಗ್ರ ಕ್ರಮ ಕೈಗೊಳ್ಳುವುದಾಗಿಯೂ ಆರಕ್ಷಕರಿಗೆ ಗೃಹ ಇಲಾಖೆ ಸಭೆಯಲ್ಲಿ ಗೃಹ ಮಂತ್ರಿ ಜಾರ್ಜ್ ಎಚ್ಚರಿಸಿದ್ದಾರೆ.
ಆದರೆ ಈ ಚಂದಾ ವಸೂಲಿ ದಂಧೆ ನಾಜೂಕಾಗಿ ಪೊಲೀಸರ ಜೀವನದಲ್ಲಿ ಹಾಸುಹೊಕ್ಕಾಗಿದ್ದು ಇದನ್ನು ಓಡಿಸುವುದು ಅಷ್ಟು ಸುಲಭದ ಮಾತಲ್ಲ. ರಸ್ತೆ ಬದಿಯಲ್ಲಿ ಬೋಂಡಾ ಮಾರುವಾತ ಶಪಿಸುತ್ತಾ ಇವರಿಗೆ ಮಾಮೂಲಿ ಕೊಡುತ್ತಾನೆ. ಬೆಳಿಗ್ಗೆ ಎಲ್ಲೋ ಕೆಲಸ ಮಾಡಿಕೊಂಡು ಬಂದು ಸಂಜೆ ವೇಳೆ ಹೊಟ್ಟೆಪಾಡಿಗಾಗಿ ಒಂದು ತಳ್ಳುವ ಗಾಡಿಯಲ್ಲಿ ಬಂದು ವ್ಯಾಪಾರ ಶುರು ಮಾಡಿದ್ದೆ ತಡ ಪೊಲೀಸರು ಬಂದು ಮಾಮೂಲಿ ನಿಗದಿಗೊಳಿಸುತ್ತಾರೆ. ಅವರಲ್ಲೂ ಭೇದಗಳಿವೆ. ಬಿಳಿಗೆ ಇಷ್ಟು ಖಾಕಿಗೆ ಇಷ್ಟು ಅಂತ. ಇದಕ್ಕಾಗಿ ಪೊಲೀಸ್ ಇಲಾಖೆ ಇವರಿಗೆ ಚೀತಾ, ಹೊಯ್ಸಳ ಎಂಬ ಹೆಸರಿನ ವಾಹನಗಳನ್ನು ಕೊಟ್ಟಿದೆ ಎಂದು ಜನ ಮಾತನಾಡುವುದನ್ನು ನಾವು ಕೇಳುತ್ತಿದ್ದೇವೆ. ಗೃಹಸಚಿವರ ಹೇಳಿಕೆಯಿಂದ ಯಾರೂ ಕಂಗೆಟ್ಟು ಕುಳಿತಂತೆ ಕಾಣುತ್ತಿಲ್ಲ. ನಿಜಕ್ಕೂ ಈ ಕಾರ್ಯ ಫಲಪ್ರದವಾಗಿಸಲು ಸರ್ಕಾರ ಶ್ರಮಿಸಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.