ADVERTISEMENT

ಚರಂಡಿ ಮುಚ್ಚಿ

ಜಕ್ಕೂರು ಎಸ್.ನಾಗರಾಜು
Published 9 ಜುಲೈ 2012, 19:30 IST
Last Updated 9 ಜುಲೈ 2012, 19:30 IST

ನಗರದ ರೇಸ್ ಕೋರ್ಸ್ ಗೋಡೆ ತೆರವು ಮಾಡಿ ರಸ್ತೆಯನ್ನು ವಿಸ್ತರಿಸಲಾಯಿತು. ಚರಂಡಿ ನಿರ್ಮಿಸಿ ಮೇಲೆ ಸಿಮೆಂಟ್ ನೆಲಹಾಸಿನ ಹೊದಿಕೆ ಮಾಡಿ ಉತ್ತಮ ಪಾದಚಾರಿ ರಸ್ತೆ ಮಾಡಿದರು.

ಜನತಾ ದಳ (ಎಸ್) ಕಚೇರಿ ಸಮೀಪ ರೇಸ್‌ಕೋರ್ಸ್ ಗೋಡೆಯ ಪಕ್ಕದಲ್ಲಿ ಚರಂಡಿಗೆ (ಸ್ವಲ್ಪ ದೂರ) ಸಿಮೆಂಟ್ ನೆಲಹಾಸಿನ ಹೊದಿಕೆ ಹಾಕದೆ ಬಿಟ್ಟಿರುವುದರಿಂದ ಪಾದ ಚಾರಿಗಳು ಇಲ್ಲಿ ರಸ್ತೆಗೆ ಇಳಿಯಲೇಬೇಕು. ದೂರದ ಊರುಗಳಿಂದ ಬರುವ ಖಾಸಗಿ ಬಸ್‌ಗಳು ಇಲ್ಲಿ ಪ್ರಯಾಣಿಕರನ್ನು ಇಳಿಸುವುದರಿಂದಲೂ ಇಲ್ಲಿ ಆಟೊ ನಿಲ್ದಾಣವೂ ಇದೆ. 

ಈ ತೆರೆದ ಚರಂಡಿಯು ಸಾರ್ವಜನಿಕರು ತಮ್ಮ ದೇಹ ಬಾಧೆ ತೀರಿಸಿಕೊಳ್ಳುವ ಮೂತ್ರಾಲಯವಾಗಿ ಮಾರ್ಪಟ್ಟಿದೆ. ಈ ಸ್ಥಳ ಮೂತ್ರಾಲಯಕ್ಕೆ ಕಾಯ್ದಿಟ್ಟ ಸ್ಥಳ ಎಂಬಂತೆ ಇದೆ.

ಚರಂಡಿಯನ್ನು ಮುಚ್ಚದೇ ಬಿಟ್ಟಿರುವುದರಿಂದ ರೇಸ್‌ಕೋರ್ಸ್ ಗೋಡೆಗೆ ಅಂಟಿಸಿದ ಸಿನಿಮಾ ಪೋಸ್ಟರ್‌ಗಳು ಹಳೆಯದಾಗುತ್ತಿದ್ದಂತೆಯೇ ಹೊಸ ಪೋಸ್ಟರ್ ಅಂಟಿಸಲು ಹಳೇ ಪೋಸ್ಟರ್ ಕಿತ್ತು ಈ ತೆರೆದ ಚರಂಡಿಗೇ ತುಂಬುತ್ತಾರೆ. ತೆರೆದ ಚರಂಡಿ ನಗರ ಸೌಂದರ್ಯಕ್ಕೆ ಮಾರಕವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.