ADVERTISEMENT

ಚುನಾವಣಾ ಆಯೋಗದ ಕ್ರಮ ಸ್ವಾಗತಾರ್ಹ

ನಿತ್ಯಶ್ರೀ.ಆರ್
Published 1 ಏಪ್ರಿಲ್ 2013, 19:59 IST
Last Updated 1 ಏಪ್ರಿಲ್ 2013, 19:59 IST

ವಿದ್ಯುನ್ಮಾನ ಮತಯಂತ್ರ ಬಳಕೆ ಕುರಿತು ಮತದಾರರಲ್ಲಿ ಅರಿವು ಮೂಡಿಸಲು ಚುನಾವಣಾ ಆಯೋಗ ಮತದಾರರ ಮನೆ ಬಾಗಿಲಲ್ಲೇ ಯಂತ್ರದ ಪ್ರಾತ್ಯಕ್ಷಿಕೆ (ಪ್ರ.ವಾ ಏ.1ರ) ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ.

ಹಿಂದೆ ಎಷ್ಟೋ ಅಕ್ಷರಸ್ಥರೂ ಸಹ ಮತಯಂತ್ರದ ಬಳಕೆಯ ಬಗ್ಗೆ ಅರಿವಿಲ್ಲದೆ ತಾವಂದುಕೊಂಡ ಅಭ್ಯರ್ಥಿಗೆ ಮತ ಹಾಕುವುದರಿಂದ ವಂಚಿತರಾಗುತ್ತಿದ್ದರು. ಅವರ ಮತಗಳು ತಿರಸ್ಕೃತವಾಗುವ ಸಾಧ್ಯತೆ ಹೆಚ್ಚಿರುತ್ತಿತ್ತು.  ಮುಖ್ಯವಾಗಿ ಗ್ರಾಮೀಣ ಪ್ರದೇಶ ಜನತೆ ಹಾಗೂ ನೂತನ ಮತದಾರರಿಗೆ ಗೊಂದಲ ಉಂಟಾಗುತ್ತಿತ್ತು. ಆಯೋಗ ಹಮ್ಮಿಕೊಂಡ ಈ ಅಭಿಯಾನ ಸಮಯೋಚಿತವಾಗಿದೆ. ಇದಲ್ಲದೆ ಮತದಾರರ ಮನೆ ಬಾಗಿಲಿಗೆ ವೋಟರ್ ಸ್ಲಿಪ್ (ಮತದಾರರ ಚೀಟಿ) ನೀಡುವ ಯೋಜನೆ ಉತ್ತಮವಾದುದು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.