ADVERTISEMENT

ಚೇಂಬರ್ ಸ್ವಚ್ಛಗೊಳಿಸಿ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2011, 19:30 IST
Last Updated 21 ಫೆಬ್ರುವರಿ 2011, 19:30 IST

ವಾರ್ಡ್ ನಂ. 71ನೇ ಈಜಿಪುರದ ಮುಖ್ಯ ರಸ್ತೆ (ಸ್ನೇಹ ಬೇಕರಿ ಪಕ್ಕ) 1ನೇ ಕ್ರಾಸ್‌ನಲ್ಲಿ ಸುಮಾರು ಹತ್ತು-ಹದಿನೈದು ದಿನಗಳಿಂದ ಒಳಚರಂಡಿ ಚೇಂಬರ್ ಕಟ್ಟಿಕೊಂಡು ಹೊಲಸು ನೀರು ರಸ್ತೆಯಲ್ಲೆಲ್ಲಾ ಹರಿಯುತ್ತಿದೆ. ಈ ಬಡಾವಣೆಯ ಮನೆಗಳ ಮುಂದೆಲ್ಲಾ ಈ ತ್ಯಾಜ್ಯನೀರಿನ ಕಿರಿಕಿರಿ, ದುರ್ನಾತ.

ಇಲ್ಲಿನ ಒಳಚರಂಡಿ ಪೈಪುಗಳ ವ್ಯಾಸವು ಚಿಕ್ಕದಾಗಿದ್ದು ತುಂಬಾ ಹಳೆಯದಾಗಿದೆ, ಆದುದರಿಂದ ತ್ಯಾಜ್ಯ  ನೀರು ಸರಾಗವಾಗಿ ಹರಿಯದೆ ಆಗಾಗ ಕಟ್ಟಿಕೊಳ್ಳುತ್ತದೆ. ಈ ರಸ್ತೆಗೆ ದೊಡ್ಡ ಪೈಪುಗಳನ್ನು ಅಳವಡಿಸಬೇಕೆಂದು ಈ ಹಿಂದೆ ಜಲಮಂಡಳಿಗೆ ಮನವಿಯನ್ನೂ ಸಲ್ಲಿಸಲಾಗಿತ್ತು. ಆದರೆ, ಮಂಡಳಿ ಈ ಬಗ್ಗೆ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಈಗಲೂ ಚೇಂಬರ್ ಕಟ್ಟಿಕೊಂಡಿರುವ ಬಗ್ಗೆ ಸಂಬಂಧಿಸಿದ ಕಚೇರಿಗೆ ದೂರು ನೀಡಲಾಗಿದೆ. ಆದರೆ ಯಾರೂ ಗಮನ ಹರಿಸಿಲ್ಲ. ಈಗಲಾದರೂ ವಿಳಂಬ ಮಾಡದೆ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಬಂದು ಪರಿಶೀಲಿಸಿ ತೊಂದರೆ ನಿವಾರಿಸಬೇಕೆಂದು ಮನವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.