ADVERTISEMENT

ಜನಗಣತಿಯ ಒಳ್ಳೆಯ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2011, 18:30 IST
Last Updated 8 ಫೆಬ್ರುವರಿ 2011, 18:30 IST

ಇಂದಿನಿಂದ ಆರಂಭವಾಗುವ ಜನಗಣತಿಯಲ್ಲಿ ಮೊದಲ ಬಾರಿಗೆ ಮಂಗಳ ಮುಖಿಯರನ್ನು ಗಣತಿ ಮಾಡುವ ನಿರ್ಧಾರ ನಿಜಕ್ಕೂ ಒಳ್ಳೆಯ ಕಾರ್ಯ. ಅಲಕ್ಷ್ಯಕ್ಕೆ ಮತ್ತು ನಾಗರಿಕ ಜನರ ತಿರಸ್ಕಾರಕ್ಕೆ ಒಳಗಾಗಿರುವ ಈ ಮೂರನೇ ಲಿಂಗಿಗಳನ್ನು ಅರ್ಥಾತ್ ಗಂಡು ದೇಹದೊಳಗಿರುವ ಹೆಣ್ಣುತನದ ಜೀವಿಗಳನ್ನು ಮಾನ್ಯಮಾಡುತ್ತಿರುವ ಬೆಳವಣಿಗೆ ನಿಜಕ್ಕೂ ಸ್ವಾಗತಾರ್ಹ.

ಆದರೆ ಇವರನ್ನು ಕಂಡರೆ ಮೂಗುಮುರಿಯುವ  ಮತ್ತು ಒಂದು ರೀತಿಯ ಭಯ ಪಡುವ ನಾಗರಿಕ ಸಮಾಜ ಇವರನ್ನು ನಮ್ಮಂತೆ ಮನುಷ್ಯರನ್ನಾಗಿಸುವ ದಿಕ್ಕಿನಲ್ಲಿ ಯೋಚಿಸಬೇಕು. ಅಂತೆಯೇ ಸರ್ಕಾರ ಒಂದಿಷ್ಟು ಕಾರ್ಯಕ್ರಮವನ್ನು ರೂಪಿಸಬೇಕು. ಇಲ್ಲವಾದರೆ ಇವರ ಗಣತಿಗೆ ಯಾವ ಕಿಮ್ಮತ್ತೂ ಸಿಗದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.