ADVERTISEMENT

ಜನತಂತ್ರ ವ್ಯವಸ್ಥೆಗೆ ಅಪಚಾರ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2011, 19:30 IST
Last Updated 26 ಸೆಪ್ಟೆಂಬರ್ 2011, 19:30 IST

ಮುಖ್ಯಮಂತ್ರಿ ಸ್ವಯಂಘೋಷಿತ ಜಗದ್ಗುರು ಮಠಾಧೀಶರ ಕಾಲಿಗೆ ಬೀಳುವುದು ಎಷ್ಟು ಸಮಂಜಸ (ಪ್ರ.ವಾ. ಆ  30)? ಬೀಳಿಸಿಕೊಳ್ಳುವುದು ಎಷ್ಟು ಸಮಂಜಸ! ದೇಶದ ಯಾವುದೇ ರಾಜ್ಯಗಳಲ್ಲಿ ಕಾಣಸಿಗದ ಈ ಅನಿಷ್ಠ ಪ್ರಕ್ರಿಯೆ ನಮ್ಮಲ್ಲಿ ಕಾಣುತ್ತಿರುವುದು ನೋವು-ನಾಚಿಕೆ ತರುತ್ತಿದೆ.

 ಕ್ರಾಂತಿ ಪುರುಷರು ವಿಚಾರವಾದಿಗಳು ಜನಿಸಿರುವ ಇಲ್ಲಿ ಮೌಢ್ಯತೆ, ಅಜ್ಞಾನ ತಾಂಡವವಾಡುತ್ತಿದೆ. ತಾನೊಬ್ಬ ಜನರ ಪ್ರತಿನಿಧಿಯಾಗಿದ್ದು, ಸಂವಿಧಾನಕ್ಕೆ ಬದ್ಧನಾಗಿರಬೇಕೆಂಬ ಕನಿಷ್ಠ ಜ್ಞಾನ ಕೂಡ ಇಟ್ಟುಕೊಳ್ಳದೆ ವರ್ತಿಸುವುದು ಎಷ್ಟು ಸರಿ?

ಸಂವಿಧಾನದತ್ತ ವೈಚಾರಿಕತೆ, ವೈಜ್ಞಾನಿಕತೆ ಬಿತ್ತಬೇಕಾದವರೇ ಮೌಢ್ಯದ ದಾಸರಾದರೆ ಹೇಗೆ?  ಅಧಿಕಾರ ಮುಗಿದ ಮೇಲೆ ಅವರು ಹೇಗಾದರೂ ವರ್ತಿಸಲಿ ಅದರ ಬಗ್ಗೆ ತಕರಾರಿಲ್ಲ.

ಅಧಿಕಾರದಲ್ಲಿರುವಾಗ ಸಂವಿಧಾನಕ್ಕೆ ಬದ್ಧರಾಗಿ ನಡೆದುಕೊಳ್ಳಬೇಕೆಂಬುದು ಸಂವಿಧಾನಬದ್ಧ ಜನತಂತ್ರ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟಿರುವವರ ತಕರಾರು. ಸಂವಿಧಾನವೇ ದೇವರು! ಮಠಾಧೀಶರಲ್ಲ!
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.