
ಮೂಢನಂಬಿಕೆ ಪ್ರತಿಬಂಧಕ ಮಸೂದೆ ರೂಪಿಸಲು ರಾಜ್ಯ ಸರ್ಕಾರ ಉತ್ಸಾಹ ತೋರಿರುವುದು ಒಳ್ಳೆಯದೇ. ಆದರೆ ಈ ಸಂಬಂಧ ಆತುರದ ನಿರ್ಧಾರ ಸಲ್ಲದು. ಮನಸ್ಸಿನಲ್ಲಿ ಗಟ್ಟಿಯಾಗಿ ನಾಟಿರುವ ಮೂಢನಂಬಿಕೆಗಳನ್ನು ಏಕಾಏಕಿ ನಿಲ್ಲಿಸಲು ಸಾಧ್ಯವಿಲ್ಲ.
ಅರಿವು ಮೂಡಿಸುವ ಮೂಲಕ ಇಂತಹ ನಂಬಿಕೆಗಳಿಂದ ಹೊರಬರಲು ಜನರನ್ನು ಪ್ರೇರೇಪಿಸಬೇಕು. ಹಂತ ಹಂತವಾಗಿ ಮಾಡುವಂಥ ಕೆಲಸ ಇದು. ಮಸೂದೆ ರೂಪಿಸುವ ಮೊದಲು ಮೂಢ ನಂಬಿಕೆಗಳು ಯಾವುವು ಎಂದು ಪಟ್ಟಿ ಮಾಡಲಿ.
ಆ ಪಟ್ಟಿಯನ್ನು ಬಹಿರಂಗಪಡಿಸಲಿ. ಆ ಬಗ್ಗೆ ಸಾರ್ವಜನಿಕ ಚರ್ಚೆಗೆ ಅವಕಾಶ ಕೊಟ್ಟು ನಂತರ ನಿರ್ಧಾರ ಕೈಗೊಳ್ಳಬೇಕು. ಉದ್ದೇಶಿತ ಮಸೂದೆಯು ಧಾರ್ಮಿಕ ಭಾವನೆಗಳನ್ನು ಕೆರಳಿಸುವಂತಿರಬಾರದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.