
ವಿದ್ಯಾಮಾನ್ಯನಗರ, ಓಂಕಾರನಗರ ಮತ್ತು ಶ್ರೀ ರಾಘವೇಂದ್ರನಗರ ಬಡಾವಣೆಗಳು ಒಂದರ ಪಕ್ಕದಲ್ಲಿ ಒಂದು ಆಂಧ್ರಹಳ್ಳಿಯ ಎರಡನೇ ಹಂತದಲ್ಲಿವೆ.
ಈ ಪ್ರದೇಶದಲ್ಲಿ ಸರಗಳ್ಳರ ಹಾವಳಿ ಹೆಚ್ಚಾಗಿದೆ. ರಸ್ತೆಯಲ್ಲಿ ಓಡಾಡುವ ಹೆಂಗಸರ ಮತ್ತು ಮಕ್ಕಳ ಚಿನ್ನದ ಆಭರಣಗಳನ್ನು ಕಿತ್ತು ಪರಾರಿಯಾಗಿರುವ ಘಟನೆಗಳು ಮೇಲಿಂದ ಮೇಲೆ ಜರುಗುತ್ತಿವೆ.
ಪೊಲೀಸ್ ಅಧಿಕಾರಿಗಳು ಇಲ್ಲಿ ಗಸ್ತು ತಿರುಗುವುದನ್ನು ನಿಯಮಿತಗೊಳಿಸಿದರೆ ಈ ಸಮಸ್ಯೆಗೆ ಪರಿಹಾರ ಸಿಗಬಹುದು. ದಯಮಾಡಿ, ಪೊಲೀಸರು ಈ ಪತ್ರಕ್ಕೆ ಸ್ಪಂದಿಸಬೇಕಾಗಿ ವಿನಂತಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.