ಶಾಲಾ ಪರೀಕ್ಷೆಯ ಪ್ರಶ್ನೆಪತ್ರಿಕೆಯಲ್ಲಿ ಸಾಮಾನ್ಯವಾಗಿ ಒಂದು ಪ್ರಶ್ನೆ ಇರುತ್ತದೆ: ನೀವು ಇತ್ತೀಚೆಗೆ ಕೈಗೊಂಡ ಪ್ರವಾಸ ಅಥವಾ ನೋಡಿದ ಪ್ರೇಕ್ಷಣೀಯ ಸ್ಥಳದ ಬಗ್ಗೆ ಪ್ರಬಂಧ ಬರೆಯಿರಿ– ಈ ತೆರನ ಪ್ರಶ್ನೆ. ನಮ್ಮ ಶಾಸಕರು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ಗಳಿಗೆ ಸರ್ಕಾರದ ವತಿಯಿಂದ ಜನರ ತೆರಿಗೆ ಹಣ ಬಳಸಿಕೊಂಡು, ‘ಅಧ್ಯಯನ ಪ್ರವಾಸ’ ಎಂಬ ಹೆಸರಿನಲ್ಲಿ ಪ್ರವಾಸ ಹೋಗಿ ಬಂದು ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದರು. ಈ ವರದಿಯಲ್ಲಿ ಶಾಸಕರು ಕಂಡ, ತಿಳಿದುಕೊಂಡ ಮತ್ತು ನಮ್ಮ ರಾಜ್ಯದಲ್ಲೂ ಜಾರಿಗೆ ತರಬೇಕೆಂಬ ಅಂಶಗಳ ಪ್ರಸ್ತಾಪವಿದೆ.
ಹಸು–ಕುರಿಗಳು ಮೇಯುವುದು, ಬೆಂಗಳೂರಿನ ವಂಡರ್ಲಾ ಅಂತಹ ವಿನೋದ ತಾಣಗಳು, ಹೆದ್ದಾರಿಗಳಲ್ಲಿ ಶೌಚಾಲಯ, ರಸ್ತೆ ನಿಯಮ ಪಾಲನೆ ಇಂಥವುಗಳನ್ನು ಕಂಡು ಬೆರಗಾಗಿ ಶಾಸಕರು ಶ್ರದ್ಧೆಯಿಂದ ವರದಿ ಕೊಟ್ಟಿದ್ದಾರೆ. ಇವರು ಕಂಡದ್ದರಲ್ಲಿ ಏನು ಹೊಸತನವಿದೆ? ಅಲ್ಲಿಗೆ ಹೋಗಿಯೇ ಇವನ್ನೆಲ್ಲ ತಿಳಿದುಕೊಳ್ಳಬೇಕಾಗಿತ್ತೇ? ಇಂಥ ಶುಷ್ಕ ವರದಿ ಸಿದ್ಧಗೊಳಿಸುವ ಬದಲು ಸುಮ್ಮನಿರಬಹುದಿತ್ತು. ಇದು ಸರ್ಕಾರಿ ದಾಖಲೆಯಾಗಬೇಕೇ?
ರಾಜ್ಯಕ್ಕೆ ಇಂಥ ವರದಿಗಳಿಂದ ಆಗುವ ಪ್ರಯೋಜನ ಶೂನ್ಯ. ಎಂದಾಗ ಜನರ ಹಣ ಹಿಂದಿರುಗಿಸಬೇಕಾಗುತ್ತದಲ್ಲವೇ? ಮಕ್ಕಳು ಪ್ರಾಮಾಣಿಕವಾಗಿ ಬರೆಯುವ ಉತ್ತರದಲ್ಲಿ ಲವಲವಿಕೆ, ಜ್ಞಾನದ ಹಸಿವು ಕಾಣಲು ಸಾಧ್ಯ. ದೊಡ್ಡವರ ವರದಿಯಲ್ಲಿ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.