ADVERTISEMENT

ದ್ವಿಮುಖ ರಸ್ತೆಯಾಗಿ ಮಾರ್ಪಡಿಸಿ

​ಪ್ರಜಾವಾಣಿ ವಾರ್ತೆ
Published 25 ಜೂನ್ 2012, 19:30 IST
Last Updated 25 ಜೂನ್ 2012, 19:30 IST

ಬಸವನಗುಡಿ ರಸ್ತೆ ಮತ್ತು ಶಂಕರಮಠ ರಸ್ತೆಯ ಮಧ್ಯದಲ್ಲಿ ರಂಗರಾವ್ ರಸ್ತೆ ಇದೆ. ಈ ರಸ್ತೆಯು ದ್ವಿಮುಖ ರಸ್ತೆಯಾಗಿತ್ತು. ನಂತರ ಏಕಮುಖ ರಸ್ತೆಯಾಗಿ ಮಾಡಿರುವುದರಿಂದ ರೈಲು ನಿಲ್ದಾಣ ಮತ್ತು ಬಸ್ ನಿಲ್ದಾಣದಿಂದ ಚಾಮರಾಜಪೇಟೆಯ ಮೂಲಕ ಹನುಮಂತನಗರ, ಶ್ರೀನಗರಕ್ಕೆ ಹೋಗುವ ವಾಹನಗಳು ಚಾಮರಾಜಪೇಟೆಯ ಐದನೇ ಮುಖ್ಯರಸ್ತೆಯ ಬಲಕ್ಕೆ ಹೋಗಿ ನಂತರ ಬಸವಣ್ಣನ ಗುಡಿಯ ರಸ್ತೆಗೆ ಎಡಕ್ಕೆ ತಿರುಗಿ ಹೋಗಬೇಕಾಗುತ್ತದೆ. ಇದರಿಂದ ವಾಹನಗಳ ಸಂಖ್ಯೆ ಅಧಿಕವಾಗಿ ಸಂಚರಿಸಲು ಬಾರಿ ತೊಂದರೆಯಾಗುತ್ತದೆ.

ಆದ್ದರಿಂದ ರಂಗರಾವ್ ರಸ್ತೆಯನ್ನು ಏಕಮುಖ ರಸ್ತೆಯ ಬದಲಿಗೆ ದ್ವಿಮುಖ ರಸ್ತೆಯಾಗಿ ಪರಿವರ್ತಿಸಿದರೆ ವಾಹನಗಳ ಒತ್ತಡವು ಕಮ್ಮಿಯಾಗುವುದರಿಂದ ವಾಹನ ಸವಾರರಿಗೆ ಅನುಕೂಲವಾಗುತ್ತದೆ. ಸಂಬಂಧಪಟ್ಟವರು ಕೂಡಲೆ ಜಾರಿಗೆ ತರಬೇಕು ಎಂದು ಸಾರ್ವಜನಿಕರ ಪರವಾಗಿ ಮನವಿ ಮಾಡಿಕೊಳ್ಳುತ್ತೇನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.