ADVERTISEMENT

ನಮ್ಮದು ಜಾತ್ಯತೀತ ರಾಷ್ಟ್ರವೇ?

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2012, 19:30 IST
Last Updated 1 ಮಾರ್ಚ್ 2012, 19:30 IST

ಸಂವಿಧಾನದ ಪೀಠಿಕೆಯಲ್ಲಿಯೇ `ಜಾತ್ಯತೀತ~ ಎಂಬ ಪದವನ್ನು ಹೊಂದಿರುವುದು ಪ್ರತಿಯೊಬ್ಬ ಭಾರತೀಯನೂ ಹೆಮ್ಮೆ ಪಡುವ ವಿಷಯ. ಆದರೆ ಭಾರತದಲ್ಲಿ ನಿಜವಾಗಿಯೂ ಆ ಪರಿಸ್ಥಿತಿ ಇದೆಯೇ ಎಂಬುದನ್ನು ಪರಾಮರ್ಶಿಸಿಕೊಳ್ಳುವ ಅಗತ್ಯವಿದೆ.

ಸ್ವಾತಂತ್ರ್ಯಾನಂತರ ದೇಶವನ್ನು ಆಳಿದ, ಆಳುತ್ತಿರುವ ಮತ್ತು ಭವಿಷ್ಯದಲ್ಲಿ ಆಳುವ ಪ್ರತಿಯೊಂದು ರಾಜಕೀಯ ಪಕ್ಷ ಜಾತಿ ಆಧಾರಿತವಾಗಿಯೇ ಹುಟ್ಟಿವೆ, ಬೆಳೆದಿವೆ ಮತ್ತು ತನ್ನ ಯೋಜನೆಗಳನ್ನು ಹಾಕಿಕೊಂಡಿವೆ. ಪ್ರತಿಯೊಂದು ಪಕ್ಷವೂ ಜಾತಿ ಆಧಾರದಲ್ಲಿಯೇ ಅಭ್ಯರ್ಥಿಗಳನ್ನು ಚುನಾವಣೆಗೆ ನಿಲ್ಲಿಸುತ್ತದೆ ಮತ್ತು ಜಾತಿ ಆಧಾರದಲ್ಲಿ ಮತ ಯಾಚಿಸುತ್ತದೆ.

ನಮ್ಮ ಕರ್ನಾಟಕದಲ್ಲಂತೂ ಜಾತಿವಾದದ ನಗ್ನ ನರ್ತನ ಎಗ್ಗಿಲ್ಲದೆ ನಡೆಯುತ್ತಿದೆ. ಸಮಾಜ ಸುಧಾರಕರಾಗ ಬೇಕಾಗಿದ್ದ ಮಠಾಧೀಶರು ರಾಜಕಾರಣಿಗಳೊಂದಿಗೆ ಸೇರಿ ಅತ್ಯಂತ ಕೆಟ್ಟ ಜಾತಿವಾದಿಗಳಾಗಿದ್ದಾರೆ.
 
ಜಾತಿಗಳನ್ನು ಓಲೈಸುವ ರಾಜಕಾರಣ ಮಿತಿಮೀರಿದೆ. ಇದು ಹೀಗೇ ಮುಂದುವರಿದರೆ ಪ್ರಮುಖ ಜಾತಿಗಳ ವಿರುದ್ಧ ಇತರ ಎಲ್ಲ ಜಾತಿಗಳು ಒಂದಾಗುವ ಪರಿಸ್ಥಿತಿ ನಿರ್ಮಾಣವಾದೀತು. ಅದರ ಪರಿಣಾಮ ನೆನಸಿಕೊಂಡರೆ ಭಯವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.