ADVERTISEMENT

ನಾವೇ ಸುದೈವಿಗಳು!

ಕೆ.ಜಿ.ಭದ್ರಣ್ಣವರ, ಮುದ್ದೇಬಿಹಾಳ
Published 31 ಜುಲೈ 2015, 19:45 IST
Last Updated 31 ಜುಲೈ 2015, 19:45 IST

‘ಚಲಿಸುತ್ತಿದ್ದ ರೈಲಿನಿಂದ ಪೊಲೀಸ್ ಸಿಬ್ಬಂದಿ ಹೊರದಬ್ಬಿದ್ದರಿಂದ, 27 ವರ್ಷ ವಯಸ್ಸಿನ ರಾಷ್ಟ್ರೀಯ ಮಟ್ಟದ ಕ್ರೀಡಾ ಪಟುವೊಬ್ಬರು ಸಾವನ್ನಪ್ಪಿದ ಘಟನೆ, ಉತ್ತರಪ್ರದೇಶದಲ್ಲಿ  ನಡೆದಿದೆ. (ಪ್ರ.ವಾ., ಜುಲೈ 25). ಇದು ಅತ್ಯಂತ ಹೇಯ ಹಾಗೂ ಅಮಾನುಷ ಕೃತ್ಯ! ಸಾರ್ವಜನಿಕರ ರಕ್ಷಣೆಯ ಜವಾಬ್ದಾರಿ ಹೊತ್ತ ಪೊಲೀಸರೇ ರಾಕ್ಷಸರಂತೆ ವರ್ತಿಸುವುದನ್ನು ಕಂಡು ಕೆಡುಕೆನಿಸುತ್ತಿದೆ!

ಉತ್ತರ ಭಾರತದಲ್ಲಿ ರೈಲಿನಿಂದ ಮಹಿಳೆಯನ್ನು ಹೊರದಬ್ಬಿದ ಪರಿಣಾಮದಿಂದ ತರುಣಿಯೊಬ್ಬಳು ತನ್ನ ಒಂದು ಕಾಲನ್ನೇ ಕಳೆದುಕೊಂಡ ಘಟನೆ ವರದಿಯಾಗಿತ್ತು. ಅಲ್ಲಿನ ಇಂಥ ಕ್ರೌರ್ಯಗಳನ್ನು ಅವಲೋಕಿಸಿದಾಗ ಕರ್ನಾಟಕದಲ್ಲಿರುವ ನಾವೇ ಸುದೈವಿಗಳು ಅನಿಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.