ADVERTISEMENT

ನಿಜವಾದ ದೇಶಪ್ರೇಮ

ಜಡೇಕುಂಟೆ ಮಂಜುನಾಥ್
Published 29 ಜೂನ್ 2016, 19:30 IST
Last Updated 29 ಜೂನ್ 2016, 19:30 IST

ಸಿಯಾಚಿನ್ ಹಿಮಪಾತದಲ್ಲಿ ವೀರಮರಣ ಹೊಂದಿದ ಧಾರವಾಡದ ಯೋಧ ಹನುಮಂತಪ್ಪ ಕೊಪ್ಪದ ಅವರ ಕುಟುಂಬಕ್ಕೆ ಕೇಂದ್ರ ಸರ್ಕಾರ ನೆರವು ನೀಡಲಿ. ಅವರು ಆಸ್ಪತ್ರೆಯಲ್ಲಿದ್ದಾಗ ಪ್ರಧಾನಿ ಭೇಟಿ ನೀಡಿದ್ದು ಬಿಟ್ಟರೆ ಕೇಂದ್ರದಿಂದ ಈವರೆಗೆ ಬೇರೆ ನೆರವು ಸಿಕ್ಕಿಲ್ಲ ಎಂದು ಕೊಪ್ಪದ ಅವರ ಪತ್ನಿ ಮಹಾದೇವಿ ಹೇಳಿದ್ದಾರೆ. ರಾಜ್ಯ ಸರ್ಕಾರ ತನ್ನ ನೆರವನ್ನು ನೀಡುವ ಮೂಲಕ ಕೊಟ್ಟ ಮಾತು ಉಳಿಸಿಕೊಂಡಿದೆ.

ಮಹಾದೇವಿ ಅವರ ಕನಸು ಬಹು ದೊಡ್ಡದಿದೆ. ಸಮಾಜ ಅವರ ಕನಸನ್ನು ನನಸಾಗಿಸಲು ಸಹಕರಿಸಬೇಕಿದೆ. ಪತಿಯ ಹೆಸರಿನಲ್ಲಿ ಸೈನಿಕ ತರಬೇತಿ ಶಾಲೆಯ ಜೊತೆಗೆ ಯೋಗ ತರಬೇತಿ ಕೇಂದ್ರ ನಿರ್ಮಿಸಲು ಪಣ ತೊಟ್ಟಿರುವ ಅವರಿಗೆ ಕೇಂದ್ರ ಸರ್ಕಾರ ಸಹಾಯ ಹಸ್ತ ಚಾಚಿ ಮಾನಸಿಕ ಸ್ಥೈರ್ಯ ತುಂಬಬೇಕಿದೆ.

ಬಿಜೆಪಿ ರಾಜ್ಯ ನಾಯಕರು ಯೋಧನ ಕುಟುಂಬದ ಸ್ಥಿತಿಯನ್ನು ಕೇಂದ್ರಕ್ಕೆ ಮನವರಿಕೆ ಮಾಡಿಕೊಡಲಿ. ಇಂತಹ ಸಂದರ್ಭದಲ್ಲಿ ಸಹಾಯಹಸ್ತ ಚಾಚುವುದೇ ನಿಜವಾದ ದೇಶಪ್ರೇಮ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.