ಲಗ್ಗೆರೆ ಮತ್ತು ಜಾಲಹಳ್ಳಿ ಕ್ರಾಸ್ ಮೂಲಕ ದಿನಂಪ್ರತಿ ಸಾವಿರಾರು ಮಂದಿ ಓಡಾಡುತ್ತಾರೆ. ಬಹಳ ದೂರದಿಂದ ಮತ್ತು ದೂರದವರೆಗೆ ಗರ್ಭಿಣಿ ಹೆಂಗಸರು ಮತ್ತು ಕಾಲೇಜು ಹುಡುಗಿಯರು ಸಂಚರಿಸುವುದು ಸಾಮಾನ್ಯ ನೋಟ.
ಆದರೂ ಲಗ್ಗೆರೆ ಮತ್ತು ಜಾಲಹಳ್ಳಿ ಕ್ರಾಸ್ ಬಸ್ ಸ್ಟಾಪ್ ಹತ್ತಿರ ಯಾವುದೇ ಶೌಚಾಲಯ ವ್ಯವಸ್ಥೆ ಇಲ್ಲ. ದಯವಿಟ್ಟು ನಿರ್ಮಲ ರೀತಿಯ ಶೌಚಾಲಯಗಳ ವ್ಯವಸ್ಥೆ ಮಾಡಿದರೆ ಬಹಳ ಉಪಕಾರವಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.