
‘ಟಿಕೆಟ್ ಬೇಡಿದರೆ ಪಾಸ್ ಬುಕ್ ಕೇಳ್ತಾರೆ’ (ಪ್ರ.ವಾ. ಮಾ. ೨೫) ಎಂದು ಶಾಸಕ ರಮೇಶ್ ಕುಮಾರ್ ಅವರು ನಿಷ್ಠುರವಾಗಿ ಹಾಗೂ ನಿರ್ಭಯವಾಗಿ ವಿಶ್ಲೇ ಷಿಸಿರುವುದು ಪ್ರಚಲಿತ ರಾಜಕೀಯ ವ್ಯವಸ್ಥೆಯ ನಗ್ನತೆ ಯನ್ನು ಅನಾವರಣಗೊಳಿಸಿದೆ.
ಇಂದು ನಮ್ಮ ದೇಶದಲ್ಲಿ ಯಾವ ಪಕ್ಷವೂ ಈಗ ಭಿನ್ನವಾಗಿ ಕಾಣುತ್ತಿಲ್ಲ. ಪಕ್ಷದ ನೀತಿ, ಸಿದ್ಧಾಂತಗಳೆಂಬುದೆಲ್ಲ ಕೇವಲ ಬೂಸಾ ಆಗಿದೆ. ದಾರಿ ಯಾವುದಾದರೂ ಸರಿ, ವ್ಯಕ್ತಿ ಯಾರಾದರೂ ಸರಿ, ಅಧಿಕಾರದ ಗದ್ದುಗೆ ಏರಬೇಕೆಂಬುದೇ ಈಗ ಎಲ್ಲ ಪಕ್ಷಗಳ ಏಕೈಕ ಗುರಿ ಹಾಗೂ ಸಿದ್ಧಾಂತ. ಒಟ್ಟಾರೆ ದೇಶದ ರಾಜಕೀಯ ವ್ಯವಸ್ಥೆಯ ಇಂತಹ ಅಪಾಯಕಾರಿ ಬೆಳವಣಿಗೆಯು ಪ್ರಜಾಪ್ರಭುತ್ವವನ್ನು ಅಣಕಿಸುವಂತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.