ADVERTISEMENT

ನೇಮಕಾತಿ ನಿಯಮ ಸಡಿಲಿಸಿ

​ಪ್ರಜಾವಾಣಿ ವಾರ್ತೆ
Published 10 ಜನವರಿ 2012, 19:30 IST
Last Updated 10 ಜನವರಿ 2012, 19:30 IST

2009 ಸೆಪ್ಟೆಂಬರ್ ತಿಂಗಳಲ್ಲಿ 863 ಅರಣ್ಯ ರಕ್ಷಕ ಹುದ್ದೆಗಳಿಗೆ 1:20ರ ಅನುಪಾತದಲ್ಲಿ ಅರಣ್ಯ ಇಲಾಖೆ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಿತ್ತು. ಆದರೆ ಈ ವರ್ಷವೂ ಇದೇ ಅನುಪಾತದಲ್ಲಿ 596 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುವುದರಿಂದ ಅರ್ಜಿ ಸಲ್ಲಿಸಿದ ಸಾವಿರಾರು ಅಭ್ಯರ್ಥಿಗಳಿಗೆ ನಿರಾಸೆಯಾಗುವ ಸಾಧ್ಯತೆ ಇದೆ.

2008, 2009, 2010ನೇ ಸಾಲಿನಲ್ಲಿ 10ನೇ ತರಗತಿಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಅತಿಹೆಚ್ಚಿನ ಅಂಕಗಳೊಂದಿಗೆ ಉತ್ತೀರ್ಣರಾಗ್ದ್ದಿದಾರೆ. ಹೀಗಾಗಿ ಹಳೆಯ ವಿದ್ಯಾರ್ಥಿಗಳಿಗೆ 2012ರ ನೇಮಕಾತಿ ಅನುಪಾತದಲ್ಲಿ ಅವಕಾಶವೇ ದೊರೆಯುವುದಿಲ್ಲ. ಬೇರೆ ಇಲಾಖೆಗಳ ನೇಮಕಾತಿಯಂತೆ ಅನುಪಾತ ಕ್ರಮವನ್ನು ಕೈಬಿಟ್ಟು ಎಲ್ಲಾ ಅಭ್ಯರ್ಥಿಗಳಿಗೆ ಸಮಾನ ಅವಕಾಶ ಮಾಡಿಕೊಡಬೇಕು.

ನೇಮಕಾತಿ ಪ್ರಕ್ರಿಯೆಯ ಮೊದಲ ಹಂತದಲ್ಲಿ ಅರಣ್ಯ ರಕ್ಷಕ ಹುದ್ದೆಗಳು ಮತ್ತು ಪೊಲೀಸ್ ನೇಮಕಾತಿ 2011ರಂತೆ 1600 ಮೀಟರ್ ಓಟವನ್ನು 6 ನಿಮಿಷಗಳಲ್ಲಿ ಓಡುವ ದೈಹಿಕ ಸಾಮರ್ಥ್ಯದ ಪರೀಕ್ಷೆಗಳನ್ನಿಟ್ಟು ಮೊದಲ ಹಂತ ಪೂರೈಸಿ ನಂತರದ ಹಂತಗಳಿಗನುಸಾರವಾಗಿ ನೇಮಕಾತಿ ಮಾಡಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.