ADVERTISEMENT

ಪ್ರಧಾನಿಗೆ ಹೊಣೆ ಇಲ್ಲವೇ?

​ಪ್ರಜಾವಾಣಿ ವಾರ್ತೆ
Published 3 ಮೇ 2018, 19:40 IST
Last Updated 3 ಮೇ 2018, 19:40 IST

ಒಂದು ವಿರೋಧ ಪಕ್ಷವಾಗಿ ಬಿಜೆಪಿಯವರು ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಆಡಳಿತ ಪಕ್ಷವನ್ನು ಟೀಕಿಸುವುದರಲ್ಲಿ ತಪ್ಪೇನೂ ಇಲ್ಲ. ಆದರೆ ದೇಶದ ಪ್ರಧಾನಿಯೇ ರಾಜ್ಯಕ್ಕೆ ಬಂದು, ‘ಇದು ಭ್ರಷ್ಟ ರಾಜ್ಯ, ಕೊಲೆಗಡುಕರ ರಾಜ್ಯ, ಕಾನೂನು ಸುವ್ಯವಸ್ಥೆ ಇಲ್ಲದ ರಾಜ್ಯ’ ಎಂದು ಘೋಷಿಸಿದರೆ ಆಗ ಅನೇಕ ಪ್ರಶ್ನೆಗಳು ಮೂಡುತ್ತವೆ.

ಪ್ರಧಾನಿ ಅಂದರೆ ಒಕ್ಕೂಟದ ಎಲ್ಲ ರಾಜ್ಯಗಳನ್ನೂ ಒಳಗೊಂಡ ಇಡಿಯ ದೇಶಕ್ಕೆ ಒಬ್ಬ ಯಜಮಾನ ಇದ್ದಂತೆ. ಅವರು ಹೇಳುವ ಮಟ್ಟಿಗೆ ಒಂದು ರಾಜ್ಯ ಕೆಟ್ಟು ಹೋಗಿರುವುದೇ ಆದರೆ, ಇಷ್ಟೆಲ್ಲ ಬೆಳವಣಿಗೆ ನಡೆಯುತ್ತಿರುವಾಗ ಈ ಯಜಮಾನ ಏನು ಮಾಡುತ್ತಿದ್ದರು? ಅದನ್ನು ಸರಿಪಡಿಸುವುದು ಅಥವಾ ಇಲ್ಲಿನ ಸರ್ಕಾರದ ವಿರುದ್ಧ ಕ್ರಮ ಜರುಗಿಸುವುದು ಅವರ ಜವಾಬ್ದಾರಿಯೂ ಅಲ್ಲವೇ? ಎಲ್ಲಕ್ಕಿಂತಲೂ ಮುಖ್ಯವಾಗಿ ದೇಶದ ಪ್ರಧಾನಿಯೇ ಒಂದು ರಾಜ್ಯದ ಬಗ್ಗೆ ಇಷ್ಟು ಕೆಟ್ಟ ಚಿತ್ರಣ ನೀಡಿದರೆ, ಅವರ ಮಾತನ್ನು ಸತ್ಯ ಎಂದು ನಂಬಿ ಹೂಡಿಕೆದಾರರು ಇಲ್ಲಿ ಹೂಡಿಕೆ ನಡೆಸಲು ಹಿಂದೇಟು ಹಾಕಿದರೆ ಅದರಿಂದಾಗಿ ಆ ರಾಜ್ಯಕ್ಕೆ ಮಾತ್ರವಲ್ಲ, ಒಟ್ಟಾರೆ ದೇಶದ ಆರ್ಥಿಕ ಬೆಳವಣಿಗೆಯ ಮೇಲೆಯೇ ನಕಾರಾತ್ಮಕ ಪರಿಣಾಮ ಉಂಟಾಗುವುದಿಲ್ಲವೇ?

ಪ್ರಧಾನಿ ಒಂದು ಪಕ್ಷದಿಂದ ಆರಿಸಿ ಹೋಗಿರಬಹುದು, ಆದರೆ ಆ ಹುದ್ದೆಯಲ್ಲಿರುವಾಗ ಪಕ್ಷಾತೀತರಾಗಿದ್ದು, ಮಾತನಾಡುವಾಗ ಹೆಚ್ಚು ಜಾಗರೂಕತೆ ವಹಿಸಬೇಡವೇ?

ADVERTISEMENT

–ಶ್ರೀನಿವಾಸ ಕಾರ್ಕಳ, ಮಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.