ADVERTISEMENT

ಪ್ರಯೋಜನ ಏನು?

​ಪ್ರಜಾವಾಣಿ ವಾರ್ತೆ
Published 30 ಮೇ 2018, 19:30 IST
Last Updated 30 ಮೇ 2018, 19:30 IST

ಮತದಾನದ ಪ್ರಮಾಣವನ್ನು ಹೆಚ್ಚಿಸಲು ಚುನಾವಣಾ ಆಯೋಗ ಸತತವಾಗಿ ಪ್ರಯತ್ನಿಸುತ್ತಲೇ ಇದೆ. ಅದರಲ್ಲಿ ಸ್ವಲ್ಪಮಟ್ಟಿಗೆ ಯಶಸ್ವಿಯೂ ಆಗಿದೆ. ಇದರ ಮಧ್ಯೆ  ‘ನೋಟಾ’ದತ್ತ ನೋಟ ಹರಿಸುವವರ ಸಂಖ್ಯೆಯೂ ಹೆಚ್ಚುತ್ತಿರುವುದು ಗಮನಿಸಬೇಕಾದ ಅಂಶ. ಇದರಿಂದಾಗಿ ಕೆಲವು ಕ್ಷೇತ್ರಗಳಲ್ಲಿ ಫಲಿತಾಂಶವೇ ಏರುಪೇರಾಗುವ ಸಾಧ್ಯತೆ ಇದೆ. ಮತಗಟ್ಟೆಗೆ ಬಂದು ಯಾರೊಬ್ಬರ ಪರವೂ ಮತ ಹಾಕದಿರುವುದು ಸರಿಯೇ? ಇದರಿಂದ ಏನು ಪ್ರಯೋಜನ?

ಕಣದಲ್ಲಿ ಐದಾರು ಮಂದಿ ಇರುತ್ತಾರೆ. ಅವರಲ್ಲಿ ಉತ್ತಮರು ಅನ್ನಿಸಿದವರಿಗೆ ಮತ ಚಲಾಯಿಸಬಹುದು. ರಾಜಕೀಯ ಪಕ್ಷಗಳನ್ನು ಪ್ರತಿನಿಧಿಸುವವರು ಬೇಡ ಎನ್ನುವುದಾದರೆ ಪಕ್ಷೇತರರು ಇರುತ್ತಾರೆ. ಅವರನ್ನು ಬೆಂಬಲಿಸಬಹುದು. ವೋಟ್‍ಗಳು ವೇಸ್ಟ್ ಆಗುವುದರಿಂದ ಪ್ರಜಾಪ್ರಭುತ್ವ ಗಟ್ಟಿಗೊಳ್ಳುವುದಿಲ್ಲ. ಆದಕಾರಣ ನೋಟಾ ಪ್ರಸ್ತುತತೆ ಬಗ್ಗೆ ಚುನಾವಣಾ ಆಯೋಗ ಮರುಪರಿಶೀಲನೆ ನಡೆಸುವುದು ಒಳ್ಳೆಯದು.
-ಪಿ.ಜಯವಂತ ಪೈ, ಕುಂದಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT