
ಬಡ ಮತ್ತು ಸಾಮಾನ್ಯ ಜನರನ್ನು ಗುರಿಯಾಗಿರಿಸಿ ಸ್ಥಾಪಿಸಲಾದ ಸರ್ಕಾರದ ಪ್ರಮುಖ ಸಂಸ್ಥೆ ಬಿಎಂಟಿಸಿ. ಆದರೆ ಬಿಎಂಟಿಸಿ ಆಗಾಗ ಬೆಲೆ ಏರಿಸುವ ಮೂಲಕ ಬಡ ಜನರಿಗೆ ತೊಂದರೆ ಕೊಡುತ್ತಲೇ ಇದೆ.
ಖಾಸಗಿ ಕಂಪೆನಿಗಳಲ್ಲಿ ಸಣ್ಣಪುಟ್ಟ ಕೆಲಸಗಳಲ್ಲಿರುವ ಬಡ ಜನರು ದುಡಿಮೆಯ ಮೂರನೇ ಒಂದು ಭಾಗವನ್ನು ಬಸ್ ಪ್ರಯಾಣಕ್ಕೆ ಮೀಸಲಿಡಬೇಕಾದ ಪರಿಸ್ಥಿತಿಯಿದೆ.
ಇದನ್ನು ಗಮನದಲ್ಲಿಟ್ಟುಕೊಂಡು ಬೇರೆ ರೀತಿಯಲ್ಲಿ ಹಣ ಪೋಲಾಗುವುದನ್ನು ತಪ್ಪಿಸಿ ನಷ್ವವನ್ನು ಸರಿಪಡಿಸಿಕೊಂಡು ವಜ್ರ ಬಸ್‌ಗಳನ್ನು ಬಿಟ್ಟು ಉಳಿದ ಕಪ್ಪು ಹಲಗೆ, ಕೆಂಪು ಹಲಗೆ, ಪುಷ್ಪಕ್, ಸುವರ್ಣ ಬಸ್‌ಗಳ ದರವನ್ನು ಹಾಗೂ ದಿನದ, ತಿಂಗಳ ಪಾಸು ದರವನ್ನು ಮೊದಲಿನ ರೀತಿಯಲ್ಲಿಯೇ ಮುಂದುವರಿಸಿ ಬಡವರಿಗೆ ಅನುಕೂಲ ಮಾಡಿಕೊಡಬೇಕೆಂದು ಬಿಎಂಟಿಸಿ ಅಧಿಕಾರಿಗಳಲ್ಲಿ ವಿನಂತಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.