
ಜೆ.ಪಿ. ನಗರ 15ನೇ ಕ್ರಾಸ್ ಬಸ್ ನಿಲ್ದಾಣದಿಂದ ಜಯನಗರ 4ನೇ ಬ್ಲಾಕ್, ಮೆಜೆಸ್ಟಿಕ್, ಕೆ.ಆರ್.ಮಾರುಕಟ್ಟೆ, ಶಿವಾಜಿನಗರ ಮೊದಲಾದ ಸ್ಥಳಗಳಿಗೆ ಸಂಚರಿಸುವ ಪ್ರಯಾಣಿಕರಿಗೆ ಈ ನಿಲ್ದಾಣದಲ್ಲಿ ತಂಗುದಾಣ ಇಲ್ಲ. ಈ ಜಾಗದಲ್ಲಿ ನಿಂತು ಬಸ್‌ಗೆ ಕಾಯುವವರು ಬಿಸಿಲಿನಲ್ಲಿ ಬೆವರು ಸುರಿಸುತ್ತಾ ಕಷ್ಟಪಡಬೇಕಾಗಿದೆ.
ಇನ್ನು ಹೆಂಗಸರು, ಮಕ್ಕಳು, ವಯೋವೃದ್ಧರ ಸ್ಥಿತಿಯನ್ನು ಹೇಳುವಂತೆಯೇ ಇಲ್ಲ. ಹಾಗಾಗಿ, ಪ್ರಯಾಣಿಕರು ಬಿಸಿಲಿನಿಂದ ರಕ್ಷಿಸಿಕೊಳ್ಳಲು ತುರ್ತಾಗಿ ಶೆಲ್ಟರ್ ನಿರ್ಮಿಸಬೇಕಾಗಿದೆ.
ತಾತ್ಕಾಲಿಕವಾಗಿ ಪೆಂಡಾಲ್ ವ್ಯವಸ್ಥೆಯನ್ನಾದರೂ ಮಾಡುವುದು ಒಳಿತು. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಈ ನಿಲ್ದಾಣದಲ್ಲಿ ಸೂಕ್ತ ಬಸ್ ಶೆಲ್ಟರ್ ನಿರ್ಮಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲು ಮನವಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.