ADVERTISEMENT

ಬಿಇಡಿ ಕಾಲೇಜುಗಳ ದುಃಸ್ಥಿತಿ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2012, 19:30 IST
Last Updated 19 ಫೆಬ್ರುವರಿ 2012, 19:30 IST

 ಶಿಕ್ಷಕರ ಮತ್ತು ಶಿಕ್ಷಣದ ಗುಣಮಟ್ಟ ಕಾಪಾಡುವ ಉದ್ದೇಶದಿಂದ ಸ್ಥಾಪನೆಯಾದ ಡಯಟ್ ಮತ್ತು ಎನ್‌ಸಿಇಆರ್‌ಟಿ  ಸಂಸ್ಥೆಗಳ ಕಾರ್ಯ ನಿರ್ವಹಣೆಯನ್ನು ಸಂಶಯದಿಂದ ನೋಡುವಂತಾಗಿದೆ.
 
ಹಾವೇರಿ ಜಿಲ್ಲಾ ಡಯಟ್ ಮತ್ತು ಎನ್‌ಸಿಇಆರ್‌ಟಿ ಆಧೀನದಲ್ಲಿ ಬರುವ ಡಿಇಡಿ ಮತ್ತು ಬಿಇಡಿ ಕಾಲೇಜುಗಳ ದುಃಸ್ಥಿತಿಯೇ ಈ ಸಂಶಯಕ್ಕೆ ಕಾರಣ. ಕೆಲವು ಕಾಲೇಜುಗಳಲ್ಲಿ ಪ್ರಾಂಶುಪಾಲರು ಮತ್ತು ಶಿಕ್ಷಕರಾಗಿ ಕೆಲಸ ಮಾಡಿದವರ ಸಂಖ್ಯೆ ಲೆಕ್ಕಕ್ಕಿಲ್ಲ.

ಕೆಲವು ಕಾಲೇಜುಗಳಲ್ಲಿ ಪೂರ್ಣಾವಧಿ ಉಪನ್ಯಾಸಕರಿಲ್ಲ. ಶಿಕ್ಷಕರ ಸಂಬಳ ಬ್ಯಾಂಕ್ ಮೂಲಕ ಡ್ರಾ ಆಗಬೇಕೆಂಬ ನಿಯಮವೂ ಪಾಲನೆ ಆಗುತ್ತಿಲ್ಲ. ಕೆಲವು ಕಾಲೇಜುಗಳಲ್ಲಿ ಮೂಲಭೂತ ಸೌಲಭ್ಯಗಳಿಲ್ಲ.

ಆಗಷ್ಟೇ ಬಿಇಡಿ, ಎಂ.ಇಡಿ ಮುಗಿಸಿದವರನ್ನು ಶಿಕ್ಷಕರಾಗಿ ನೇಮಿಸಿಕೊಂಡು ಅವರಿಗೆ ಒಂದೆರಡು ಸಾವಿರ ಸಂಬಳ ಕೊಟ್ಟು ದುಡಿಸಿಕೊಳ್ಳುತ್ತಾರೆ.
 
ರಾಣೆಬೆನ್ನೂರಿನ ಕಾಲೇಜೊಂದು ವಿಶ್ವವಿದ್ಯಾಲಯವೊಂದರ ಶಿಕ್ಷಣ ವಿಭಾಗದ ಮುಖ್ಯಸ್ಥರಿಗೆ ಸೇರಿದ್ದು. ಅಲ್ಲಿನ ಅವ್ಯವಸ್ಥೆಗಳ ಪಟ್ಟಿ ದೊಡ್ಡದು. ಸಂಬಂಧಪಟ್ಟವರು ಇತ್ತ ಗಮನಹರಿಸಿ ಬಿಇಡಿ, ಡಿಇಡಿ ಕಾಲೇಜುಗಳ ಸಮಸ್ಯೆಗಳನ್ನು ನಿವಾರಿಸುವ ಪ್ರಯತ್ನ ಮಾಡುವರೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.