ADVERTISEMENT

ಬಿ.ಎಡ್: ‘ವಿದ್ಯಾಸಿರಿ’ ಸೌಲಭ್ಯ ನೀಡಲಿ

ಜೆ.ಎಸ್ ಪೂಜಾರ್, ಗುಲ್ಬರ್ಗ
Published 10 ಮಾರ್ಚ್ 2014, 19:30 IST
Last Updated 10 ಮಾರ್ಚ್ 2014, 19:30 IST

ವಿದ್ಯಾರ್ಥಿ ನಿಲಯದ ಸೌಲಭ್ಯ ಸಿಗದ ಮೆಟ್ರಿಕ್‌ ನಂತರದ ವಿದ್ಯಾರ್ಥಿಗಳಿಗೆ ‘ವಿದ್ಯಾಸಿರಿ’ ಯೋಜನೆ ರೂಪಿಸಿದ  ಸರ್ಕಾರ, ಈ ಯೋಜನೆಯಲ್ಲಿ  ವಿದ್ಯಾರ್ಥಿ ನಿಲಯಕ್ಕೆ ಬದಲಿಯಾಗಿ ಪ್ರತಿ ತಿಂಗಳೂ ₨ 1500ರಂತೆ ಹತ್ತು ತಿಂಗಳು ಹಣ ನೀಡುವ ಯೋಜನೆ ಜಾರಿಗೆ ತಂದಿದೆ.

ಈ ಯೋಜನೆಯ ಪ್ರಯೋಜನ  ಪಡೆಯಲು ಪಿ.ಯು.ಸಿ.ಯಿಂದ  ಸ್ನಾತಕೋತ್ತರ ಪದವಿ ಓದುತ್ತಿರುವವರೂ ಅರ್ಜಿ ಸಲ್ಲಿಸಬಹುದು ಎಂದು  ಸರ್ಕಾರ  ತಿಳಿಸಿತ್ತು.   ಅ. 5ರಂದು ಅರ್ಜಿ ಕರೆದಿತ್ತು. ಅರ್ಜಿ ಸಲ್ಲಿಸಲು ಅ. 27 ಕಡೆ ದಿನ ಆಗಿತ್ತು. ಆದರೆ ಬಿ.ಎಡ್ ತರಗತಿಗಳು ಜನವರಿಯಿಂದ ಪ್ರಾರಂಭವಾಗಿವೆ. ಇವರಿಗೆ ವಿದ್ಯಾಸಿರಿ ಯೋಜನೆ ಅನ್ವಯ  ಅರ್ಜಿ ಸಲ್ಲಿಸಲು ಸರ್ಕಾರ  ಅವಕಾಶ ಕಲ್ಪಿಸಬೇಕು.

ಸಾವಿರಾರು ವಿದ್ಯಾರ್ಥಿಗಳು ಯಾವುದೇ ವಿದ್ಯಾರ್ಥಿ ನಿಲಯದ ಸೌಲಭ್ಯವಿಲ್ಲದೆ ಬಡತನದ ಮಧ್ಯೆ ಬಿ.ಎಡ್ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.  ಸರ್ಕಾರ ಈ ಕಡೆ ಗಮನಹರಿಸಿ ಬಿ.ಎಡ್ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಿ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.