ADVERTISEMENT

ಬಿಜೆಪಿ ಅನುಸರಿಸಿದರೆ ತಪ್ಪೇ?

ಕೆ.ರಾಜಾರಾಮ ಶೆಟ್ಟಿ, ಪುತ್ತೂರು
Published 23 ಜೂನ್ 2013, 19:59 IST
Last Updated 23 ಜೂನ್ 2013, 19:59 IST

ರಾಜ್ಯ ಸರ್ಕಾರದ ಆಡಳಿತ, ಯಾವ ರಾಜಕೀಯ ಪಕ್ಷದ ಹಿಡಿತದಲ್ಲಿರುವುದೋ, ಆ ಪಕ್ಷ ತನ್ನ ಬೆಂಬಲಿಗರನ್ನೋ ಹಿತೈಷಿಗಳನ್ನೋ ನಾಯಕರನ್ನೋ ತತ್ಸಮಾನ ವಿದ್ಯಾರ್ಹತೆಗೆ ತಕ್ಕಂತೆ ಅಕಾಡೆಮಿ, ನಿಗಮ, ಮಂಡಳಿ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ನೇಮಿಸುವುದು ಇಲ್ಲವೇ ನಾಮನಿರ್ದೇಶನ ಮಾಡುವುದು ರೂಢಿ. ಈ ಪರಿಪಾಠವನ್ನು ಮೊದಲು ಆರಂಭಿಸಿದ್ದೇ ಕಾಂಗ್ರೆಸ್ ಪಕ್ಷ. ಬಳಿಕ ಜನತಾ ಪಕ್ಷ, ಜನತಾದಳ, ಬಿಜೆಪಿ ಅನುಸರಿಸಿದ್ದರಲ್ಲಿ ತಪ್ಪೇನಿದೆ?

ಕೇಂದ್ರ ಸರ್ಕಾರ ಕೂಡ ಇದೇ ಪರಿಪಾಠ ಅನುಸರಿಸುತ್ತಿದೆ. ವೈ.ಕೆ. ಮುದ್ದುಕೃಷ್ಣ ಅವರು ಬಿಜೆಪಿಯೊಂದನ್ನೇ ಗುರಿಯಾಗಿಟ್ಟುಕೊಂಡು ಟೀಕಿಸಿರುವುದು ಅರ್ಥಹೀನ. ಸರ್ಕಾರಿ ಸೇವೆಯಲ್ಲಿದ್ದಾಗ ಇದನ್ನೆಲ್ಲ ಗಮನಿಸಿಲ್ಲವೇ? ಮಲ್ಲೇಶ್ವರ, ಚಾಮರಾಜಪೇಟೆಯ ಉಲ್ಲೇಖ ಹಾಸ್ಯಾಸ್ಪದ. ಸರಿಯಲ್ಲ!
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.