ಅನ್ನದಾತನ ಬದುಕು ಬೀಜ ಕಂಪೆನಿಯವರ ಕಪಿಮುಷ್ಟಿ ಯಲ್ಲಿ ಸಿಕ್ಕಿಕೊಂಡಿದೆ. ದಾವಣಗೆರೆ, ಹಾವೇರಿ ಹಾಗೂ ಧಾರ ವಾಡ ಜಿಲ್ಲೆಗಳಲ್ಲಿ ಬಿಟಿ ಹತ್ತಿ ಸಂಪೂರ್ಣವಾಗಿ ವಿಫಲ ವಾಗಿದೆ. ಸರಿ-ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ರೈತರು ಪರಿಹಾರಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಅರ್ಜಿ ಗಳನ್ನು ಸಲ್ಲಿಸಿದ್ದಾರೆ.
ಕಳೆದ ನಾಲ್ಕೈದು ದಿನಗಳಿಂದ ಶಿಗ್ಗಾಂವಿ, ಹಾವೇರಿ, ಸವಣೂರು, ಶಿರಹಟ್ಟಿ ಹಾಗೂ ಹರಿಹರ ಭಾಗದಲ್ಲಿ ಕನಕ ಬಿಟಿ ಹತ್ತಿ ತಳಿಯ ವಿಫಲತೆಯನ್ನು ಕಣ್ಣಾರೆ ನೋಡಿದ್ದೇನೆ. ಪ್ರತೀ ತಾಲ್ಲೂಕಿನಿಂದ ಸರಿ-ಸುಮಾರು ಹತ್ತು ಸಾವಿರ ಎಕರೆ ಭೂಮಿಯಲ್ಲಿ ಕನಕ ಬಿಟಿ ಹತ್ತಿ ಬಿತ್ತನೆಯಾಗಿದೆ.
ಈ ಹತ್ತಿ ಬಿತ್ತನೆಯಾಗಿ ಸುಮಾರು ೯೦ ರಿಂದ ೧೦೦ ದಿನಗಳಾಗಿವೆ. ಪ್ರತೀ ಗಿಡದಿಂದ ಕೇವಲ ಎರಡರಿಂದ ನಾಲ್ಕು ಕಾಯಿ ಕಾಣುತ್ತಿದೆ. ಇದರ ಜೊತೆ ೨ ರಿಂದ ೩ ಹೂವುಗಳು ಮಾತ್ರ ಗಿಡದಲ್ಲಿ ಇವೆ.
ರೈತರ ಪ್ರಕಾರ ಈ ಸಮಯದಲ್ಲಿ ಗಿಡ, ಸಂಪೂರ್ಣ ಕಾಯಿ ಹಾಗೂ ಹೂವುಗಳಿಂದ ಕೂಡಿರಬೇಕಾಗಿತ್ತು. ರೈತರು ಪ್ರತೀ ದಿನ ಪರಿಹಾರಕ್ಕೆ ಮನವಿ ಮಾಡುತ್ತಿದ್ದರೂ ಸರ್ಕಾರ ಮಾತ್ರ ನಿದ್ರೆ ಮಾಡುತ್ತಿದೆ. ಕೃಷಿಯಿಂದ ಈಗಾಗಲೇ ಯುವಜನರು ವಿಮುಖರಾಗುತ್ತಿದ್ದಾರೆ. ಕಳಪೆ ಬೀಜದ ಅನಾಹುತದಿಂದ ಮತ್ತಷ್ಟು ರೈತರು ಕೃಷಿಯಿಂದ ವಿಮುಖವಾಗುವುದರಲ್ಲಿ ಸಂಶಯವಿಲ್ಲ. ಕಳಪೆ ಬೀಜ ಮಾರಾಟ ಮಾಡಿದ ಬೀಜ ಕಂಪೆನಿಯವರ ವಿರುದ್ಧ ಸರ್ಕಾರ ಕೂಡಲೇ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ರೈತರಿಗೆ ಪರಿಹಾರ ನೀಡಬೇಕು.
ಕುಲಾಂತರಿ ಬೆಳೆಯ ಅವಘಡಗಳು ದಿನದಿಂದ ದಿನಕ್ಕೆ ಉಲ್ಬಣವಾಗುತ್ತಿವೆ. ಕುಲಾಂತರಿ ಬೆಳೆಯನ್ನು ಸರ್ಕಾರ ನಿಷೇಧಿಸಿಬೇಕು. ರೈತರ ಬೀಜದ ಹಕ್ಕನ್ನು ಉಳಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.