ADVERTISEMENT

ಬುರುಡೆತಂತ್ರ!

ರಾಜಕುಮಾರ ಮಹಾದೇವ ಉಪಾಸೆ, ಅಂಜುಟಗಿ
Published 3 ಡಿಸೆಂಬರ್ 2013, 19:30 IST
Last Updated 3 ಡಿಸೆಂಬರ್ 2013, 19:30 IST

‘ಅಧಿಕಾರ’ ವೆಂಬುದೊಂದು ‘ಅಫೀಮು’
‘ಸರ್ಕಾರ’ ವೆಂಬುದೊಂದು ‘ಜೂಜು ಅಡ್ಡೆ’
ಈ ಅಡ್ಡೆಯಲ್ಲಿ ಅಡ್ಡಾಡುತ್ತಿರುವ ಸಕಲೆಂಟು ಸ್ವಾಮಿಗಳು
ಮತ್ತಿನಲ್ಲಿ ಓಲಾಡುತ್ತಿರುವ ಪರಿಯನೇನೆಂಬೆ?
‘ಪ್ರಜಾತಂತ್ರ– ಗಣತಂತ್ರ’ ವೆಂಬುದೊಂದು ‘ಬೂಟಾಟಿಕೆ’
‘ಪ್ರಜೆಯೇ ಪ್ರಭು’ ಎಂಬುದೊಂದು ‘ಬುರುಡೆ ಪುರಾಣ’
‘ಜನಸೇವೆ’ ಎಂಬುದೊಂದು ದೊಡ್ಡ ಕುಚೋದ್ಯವಯ್ಯಾ!
ಪ್ರಭುಗಳೆಲ್ಲರೂ ಕೂಡಿ ತಿರುಪೆ ತಿರುಗುತ್ತಿರುವ ಅಚ್ಚರಿಯ ನೋಡಾ,
ಇಂತಿಪ್ಪ ವಿಸ್ಮಯಕಾರಿ ಲೋಕವಕಂಡು,
‘ಹೀಗೂ ಉಂಟೆ’ ಎಂದು ಅಂತರಂಗ ಪ್ರಭು ಇದಾನೆ ಇಲ್ಲದಂತೆ ಸ್ತಬ್ಧವಾಗಿ!
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.