ADVERTISEMENT

ಬುರುಡೆ ಬಲ್ಬ್ ನಿಷೇಧ ಬೇಡ

​ಪ್ರಜಾವಾಣಿ ವಾರ್ತೆ
Published 7 ಜನವರಿ 2011, 10:35 IST
Last Updated 7 ಜನವರಿ 2011, 10:35 IST

ಕೆನಡಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಗೋವಿಂದರಾಜುರವರು ಭಾರತದಲ್ಲಿಯ ಸಿ.ಎಫ್.ಎಲ್. ದೀಪಗಳು ದೋಷಯುಕ್ತವೆಂದದ್ದು ಸರಿ, (ಪ್ರ.ವಾ. ಜ.3).

ಇದು ನನ್ನ ಸ್ವಂತ ಅನುಭವ. ರೂ. 250  ಕೊಟ್ಟು ಖರೀದಿಸಿದ ಪ್ರಸಿದ್ಧ ಕಂಪೆನಿಯ ಸಿಎಫ್‌ಎಲ್ ಬಲ್ಬ್ ಉರಿದಿದ್ದು ಕೇವಲ 240 ಗಂಟೆ. ದಿನಕ್ಕೆ ಬರೀ ಒಂದು ಗಂಟೆಯಷ್ಟೇ ಉರಿಸಿಯೂ ಕೇವಲ ಎಂಟೇ ತಿಂಗಳು ಅದು ಬಾಳಿಕೆ ಬಂದಿದ್ದು. ಈ 240 ಗಂಟೆಯಲ್ಲಿ ನನಗೆ ರೂ. 250 ಬೆಲೆಯ ವಿದ್ಯುತ್ ಉಳಿತಾಯವಾಗಿರಲು ಸಾಧ್ಯವೇ ಇಲ್ಲ. ಬಡವರು ಇಂತಹ ದುಬಾರಿ ಸಿಎಫ್‌ಎಲ್ ಬಲ್ಬುಗಳನ್ನು ಆಗಾಗ ಖರೀದಿಸಲು ಹೇಗೆ ಸಾಧ್ಯ? ಹಾಗಾಗಿ ಕೇವಲ ರೂ. 12ಕ್ಕೆ ಸಿಗುವ 2-3 ವರ್ಷ ಬಾಳಿಕೆ ಬರುವ ಬುರುಡೆ ಬಲ್ಬ್ ನಿಷೇಧ ಈಗ ಸಮರ್ಥನೀಯವಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.