ADVERTISEMENT

ಬೆಂಗಳೂರು ದರ್ಶನ

ಜಿ.ಕೃಷ್ಣಪ್ಪ
Published 4 ಜೂನ್ 2018, 19:30 IST
Last Updated 4 ಜೂನ್ 2018, 19:30 IST

ರಾಜ್ಯದ ಹೊಸ ಸರ್ಕಾರ ಬೆಂಗಳೂರಿನ ಪ್ರಗತಿಗಾಗಿ ಒಂದು ಕ್ರಿಯಾ ಯೋಜನೆ ಹೊಂದಿದೆ ಎಂದು ತಿಳಿದುಬಂದಿದೆ. ಅದಕ್ಕೆ ಪೂರಕವಾಗಿ ಉದಯಭಾನು ಕಲಾಸಂಘದವರು ಪ್ರಕಟಿಸಿರುವ ‘ಬೆಂಗಳೂರು ದರ್ಶನ’ ಹೆಸರಿನ ಮೂರು ಬೃಹತ್ ಸಂಪುಟಗಳಿವೆ. ಅದರ ಅಧ್ಯಯನವು ಹಲವು ಮಾರ್ಗದರ್ಶಿ ಸೂತ್ರಗಳನ್ನು ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ, ನಗರ ಯೋಜನಾ ತಜ್ಞರಿಗೆ ಒದಗಿಸುತ್ತದೆ.

ಇಡೀ ದೇಶದಲ್ಲಿ ಯಾವುದೇ ನಗರದ ಬಗ್ಗೆ ಯಾವುದೇ ಭಾಷೆಯಲ್ಲಿ ಇಂತಹ ಬೃಹತ್ ಕೃತಿ ಬಂದಿಲ್ಲ. ವಾಷಿಂಗ್ಟನ್, ನ್ಯೂಯಾರ್ಕ್, ಟೋಕಿಯೊದಂತಹ ನಗರಗಳ ಬಗ್ಗೆಯೂ ಇಂತಹ ಮಾಹಿತಿ ಗ್ರಂಥ ಬಂದಿಲ್ಲ ಎಂಬುದು ಆ ವಿಷಯ ಪರಿಣತರ ಅಭಿಪ್ರಾಯ. ಇವು ಸಾರ್ವಜನಿಕರಿಗೆ ಅಧ್ಯಯನಕ್ಕಾಗಿ ಗ್ರಂಥಾಲಯಗಳಲ್ಲಿ ಇರಬೇಕಾದ ಆಧುನಿಕ ನಗರ ಯೋಜನಾ ಚಿಂತನಾ ಸಂಪುಟಗಳಾಗಿವೆ. ಆದರೆ ಇವು ಯಾವುದೇ ಗ್ರಂಥಾಲಯದಲ್ಲಿ ಇರುವ ಹಾಗೆ ಕಂಡುಬಂದಿಲ್ಲ. ನೂತನ ಸರ್ಕಾರ ಇದರ ಪ್ರತಿಗಳು ರಾಜ್ಯದ ಎಲ್ಲ ಗ್ರಂಥಾಲಯಗಳಿಗೆ ತಲುಪುವಂತೆ ಮಾಡಲಿ. ಈ ಸಂಪುಟಗಳನ್ನು ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಒದಗಿಸುವ ವ್ಯವಸ್ಥೆ ಮಾಡಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT