ಎಳ್ಳು ಎಡಕಿನ ಪಕ್ಷಾ
ಬೆಲ್ಲ ಬಲಕಿನ ಪಕ್ಷಾ
ಎಳ್ಳು ಬೆಲ್ಲವು ನಮ್ಮ ಜೀವವೃಕ್ಷಾ
ಹೆಂಡತೀ ಕಾಡೂತಿ
ಗಂಡಾ ನೀ ಓಡೂತಿ
ಗಂಡಹೆಂಡಿರ ಜೀವ ಬಾಳವೃಕ್ಷಾ
ಗೆಳತಿ, ಗೆಳೆಯರು ಬರ‌್ರಿ
ಕೋರ್ಟು, ಕಟ್ಟೆಯು ಸಾಕ್ರಿ
ಆಕಡೆ ಈಕಡೆ ಮುಖವು ಯಾಕ್ರಿ?
ನಕ್ಕರೆ ನಗಿ ಚಂದ
ಉಂಡೋರು ಉಳದೋರು
ಅಂತರ ಸಾಕ್ರಿ
ಬಿಮ್ಮಾನ ಬಿಗುಮಾನ ಯಾಕ ಬೇಕ್ರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.