ಯುಗದ ನೋವಿಗೆ
ಜಗದ ನೋವಿಗೆ
ಬೇವು ಬೆಲ್ಲವ ಕೊಳ್ಳಿರಿ
ಹೊಗೆಯ ಕಳೆಯಿರಿ
ನಗೆಯ ತಳೆಯಿರಿ
ಬೆಲ್ಲ ಬ್ಯಾಳಿಯ ಸವಿಯಿರಿ
ಹಂಡೆಯೊಳಗ
ಬೇವು ತಪ್ಪಲ
ಎಣ್ಣಿಮಜ್ಜನ ಮಾಡಿರಿ
ರಾಜಕಾರಣ
ವಿನಾಕಾರಣ
ಬಿಸಿಲ ತೋರಣ ತಡೆಯಿರಿ
ಸಾಕು ಶೋಷಣೆ
ಭೂತ ಭಕ್ಷಣೆ
ರಾಷ್ಟ್ರ ರಕ್ಷಣೆ ಮಾಡಿರಿ
ಬಿಸೇ ಪಾಯಸ
ಕಂಪು ತುಪ್ಪಾ
ಕುರುಂ ಹಪ್ಪಳ
ಸವಿಯಿರಿ !
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.