ADVERTISEMENT

ಭಾಗ್ಯಜ್ಯೋತಿ ಸಮಸ್ಯೆ ಬಗೆಹರಿಸಿ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2012, 19:30 IST
Last Updated 12 ಫೆಬ್ರುವರಿ 2012, 19:30 IST

ಬಡತನ ರೇಖೆಗಿಂತ ಕೆಳಗಿರುವ ಗ್ರಾಮೀಣ ಜನರಿಗೆ ಉಚಿತ ವಿದ್ಯುತ್ ಸಂಪರ್ಕ ಕಲ್ಪಿಸಲು 1990-92ನೇ ವರ್ಷದಲ್ಲಿ   ಜಾರಿಗೆ ಬಂದ ಭಾಗ್ಯಜ್ಯೋತಿ ಯೋಜನೆಯಿಂದ ಕತ್ತಲಲ್ಲಿದ್ದ ಸಾವಿರಾರು ಜನರ ಮನೆಗಳಿಗೆ ಬೆಳಕು ಬರುವಂತೆ ಆಯಿತು. ಆದರೆ ಈ ಯೋಜನೆಯಲ್ಲಿ ಕೆಲವು ಬದಲಾವಣೆಗಳಾದವು. ವಿದ್ಯುತ್ ಕಂಪನಿಗಳು ಶುರುವಾದ ಮೇಲೆ ಈ ಯೋಜನೆಗೆ ಕತ್ತರಿ ಬಿತ್ತು.

ಭಾಗ್ಯ ಜ್ಯೋತಿ ಯೋಜನೆಯ ಅಡಿಯಲ್ಲಿ ಉಚಿತವಾಗಿ ವಿದ್ಯುತ್ ಪೂರೈಸುತ್ತಿದ್ದ ಕಂಪನಿಗಳು ಈಗ ಮಾಸಿಕ ಬಾಡಿಗೆ ನಿಗದಿಪಡಿಸಿವೆ. ವಿದ್ಯುತ್ ಬಿಲ್ ಪಾವತಿ ಮಾಡದ ಭಾಗ್ಯ ಜೋತಿ ಸಂಪರ್ಕದಾರರಿಗೆ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಾಗಿದೆ.

ಈ ಬಗ್ಗೆ ಫಲಾನುಭವಿಗಳು ಸಂಬಂಧಿಸಿದ ಅಧಿಕಾರಿಗಳನ್ನು ಕೇಳಲು ಹೋದರೆ ನಿಮಗೆ ಭಾಗ್ಯ ಜೋತಿ ವಿದ್ಯುತ್ ಸಂಪರ್ಕ ನೀಡಿಯೇ ಇಲ್ಲ. ನೀವು ಅದಕ್ಕೆ ಅನರ್ಹರು ಎಂದು ಹೇಳುತ್ತಾರೆ. ಭಾಗ್ಯಜ್ಯೋತಿ ಯೋಜನೆಯನ್ನು ಸರ್ಕಾರ ಕೈಬಿಟ್ಟಿದೆಯೇ ಎಂಬ ಬಗ್ಗೆ ಅನೇಕರಿಗೆ ಸರಿಯಾದ ಮಾಹಿತಿ ಇಲ್ಲ.

ಸಂಬಂಧ ಪಟ್ಟ ಅಧಿಕಾರಿಗಳು ಗ್ರಾಮೀಣ ಜನರಿಗೆ ಈ ಕುರಿತು ಮನವರಿಕೆ ಮಾಡಿಕೊಡುವ ಅಗತ್ಯವಿದೆ. ಸರ್ಕಾರವೂ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.