ADVERTISEMENT

ಭೈರಪ್ಪ ಮಾತು ಅರ್ಥಪೂರ್ಣ

ಆರ್.ಎಸ್.ಅಯ್ಯರ್
Published 5 ಆಗಸ್ಟ್ 2014, 19:30 IST
Last Updated 5 ಆಗಸ್ಟ್ 2014, 19:30 IST

‘ಸಿದ್ಧಾಂತಕ್ಕೆ ಕಟ್ಟುಬಿದ್ದರೆ ಯಾವುದನ್ನೂ ಸರಿ­ಯಾಗಿ ಅರ್ಥಮಾಡಿಕೊಳ್ಳಲು ಆಗಲ್ಲ. ನಮಗೆ ಬೇಕಿ­ರುವುದು ಎಡ ಇಲ್ಲವೆ ಬಲಪಂಥೀಯ ಸಿದ್ಧಾಂ­ತವಲ್ಲ; ಬದಲಾಗಿ ನೈತಿಕವಾಗಿ ಭಯ ಹುಟ್ಟಿ­ಸಬಲ್ಲ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಮೌಲ್ಯ’ ಎಂದು ಕಾದಂಬರಿಕಾರ ಎಸ್.ಎಲ್.­ಭೈರಪ್ಪ ಅವರು ‘ಪ್ರಜಾವಾಣಿ’ ಕಚೇರಿಗೆ ಭೇಟಿ­ಕೊಟ್ಟಾಗ ಅಭಿಪ್ರಾಯ­ಪಟ್ಟಿ­ರುವುದು (ಪ್ರ.ವಾ. ಆ. ೫) ಅರ್ಥ­ಪೂರ್ಣವಷ್ಟೇ ಅಲ್ಲದೆ, ತೆರೆದ ಮನಸ್ಸಿನ ಚಿಂತ­ನೆಗೆ ಅವಕಾಶ ಮಾಡಿ­ಕೊಡುವಂತಿದೆ.

‘ಸರಳ ಜೀವನ ಮತ್ತು ಉನ್ನತ ವಿಚಾರ’ ಎಂದು ಮಾತನಾಡುತ್ತಿದ್ದವರೆಲ್ಲರೂ ಅಧಿಕಾ­ರದ ಗದ್ದುಗೆ ಏರಿದ ನಂತರ ಏನೇನಾಗಿ ಹೋದ­ರೆಂಬುದು ಇತಿಹಾಸದಲ್ಲಿ ಮಾತ್ರವಲ್ಲ ವರ್ತ­ಮಾನದಲ್ಲೂ ಕಾಣುತ್ತಿರುವ ನಗ್ನಸತ್ಯ. ಇಂತ­ಹು­ದೊಂದು ಸಂದರ್ಭದಲ್ಲಿ ಭೈರಪ್ಪ ಅವರು ಸಿದ್ಧಾಂತಕ್ಕೂ, ಬದುಕಿಗೂ ಅಂತರವಿಲ್ಲದಂತೆ ಜೀವಿಸಿದ ಶಾಸ್ತ್ರಿಯ­ವ­ರನ್ನು ಉಲ್ಲೇಖಿಸಿ­ರು­ವುದು ಔಚಿತ್ಯ­ಪೂರ್ಣವಾಗಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.